ಬೆಂಗಳೂರು: ನಗದು ಮೂಲಕವೇ ವ್ಯಾಪಾರ ನಡೆಸುತ್ತಿದ್ದು, ವಾರ್ಷಿಕ ವಹಿವಾಟಿನ ಮೊತ್ತ ₹40 ಲಕ್ಷ ದಾಟಿದರೆ ಕಡ್ಡಾಯವಾಗಿ ಜಿಎಸ್ಟಿ ನೋಂದಣಿ ಮಾಡಿಸಬೇಕು ಎಂದು ವಾಣಿಜ್ಯ ತೆರಿಗೆ ಇಲಾಖೆ ಹೇಳಿದೆ.

ಯುಪಿಐ ವಹಿವಾಟು ವಾರ್ಷಿಕ ₹40 ಲಕ್ಷ ದಾಟಿದ ಬೇಕರಿ, ಹೋಟೆಲ್, ಬೀಡಾ ಅಂಗಡಿ ಮತ್ತು ಟೀ ಅಂಗಡಿ ಮಾಲೀಕರಿಗೆ ಇಲಾಖೆಯು ನೋಟಿಸ್ ನೀಡಿತ್ತು. ಜಿಎಸ್ಟಿಗೆ ನೋಂದಣಿ ಮಾಡಿಸಿ ಮತ್ತು ಜಿಎಸ್ಟಿ ಪಾವತಿಸಿ ಎಂದು ಸೂಚಿಸಿತ್ತು. ಆನಂತರ ಹಲವು ವ್ಯಾಪಾರಿಗಳು ಯುಪಿಐ ಬಳಕೆಯನ್ನು ನಿಲ್ಲಿಸಿ, ನಗದು ಮೂಲಕ ವಹಿವಾಟು ನಡೆಸುತ್ತಿದ್ದಾರೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಇಲಾಖೆಯು, ‘ಈಗಾಗಲೇ ನೋಟಿಸ್ ಪಡೆದಿದ್ದು, ಈಗ ಯುಪಿಐ ಬಳಕೆ ನಿಲ್ಲಿಸಿದರೆ ಜಿಎಸ್ಟಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅವರು ಜಿಎಸ್ಟಿಗೆ ನೋಂದಣಿ ಮಾಡಿಸಲೇಬೇಕು ಮತ್ತು ತೆರಿಗೆ ಪಾವತಿಸಲೇಬೇಕು. ಇಲ್ಲದಿದ್ದಲ್ಲಿ ಅವರ ನಗದು ವಹಿವಾಟಿನ ವಿವರಗಳನ್ನೂ ಪಡೆದು ಜಿಎಸ್ಟಿ ವಿಧಿಸಲಾಗುತ್ತದೆ’ ಎಂದು ತಿಳಿಸಿದೆ.

‘ನಗದು, ಯುಪಿಐ, ಪಿಒಎಸ್ ಯಂತ್ರ, ಚೆಕ್, ಆನ್ಲೈನ್ ಬ್ಯಾಂಕಿಂಗ್ ಸೇರಿ ಯಾವುದೇ ರೀತಿಯಲ್ಲಿ ವಹಿವಾಟು ನಡೆಸಿದರೂ ಜಿಎಸ್ಟಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ವಾರ್ಷಿಕ ವಹಿವಾಟಿನ ಮಿತಿ ಮುಟ್ಟಿದವರು ಜಿಎಸ್ಟಿಗೆ ನೋಂದಣಿ ಮಾಡಿಸಲೇಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದೆ.

‘₹40 ಲಕ್ಷದ ವಹಿವಾಟು ನಡೆಸಿದವರೆಲ್ಲರೂ ದೊಡ್ಡ ಮೊತ್ತದ ಜಿಎಸ್ಟಿ ಪಾವತಿಸಲೇಬೇಕು ಎಂದೇನಿಲ್ಲ. ಎಲ್ಲ ಸರಕು ಮತ್ತು ಸೇವೆಗಳಿಗೆ ಜಿಎಸ್ಟಿ ಅನ್ವಯವಾಗುವುದಿಲ್ಲ. ವ್ಯಾಪಾರಿಗಳು ನೋಂದಣಿ ಮಾಡಿಸಿ, ವ್ಯಾಪಾರದ ಸ್ವರೂಪವನ್ನು ವಿವರಿಸಬೇಕು. ಆಗ ಅವರಿಗೆ ಎಷ್ಟು ಜಿಎಸ್ಟಿ ಅನ್ವಯವಾಗುತ್ತದೆ ಎಂದು ಮಾಹಿತಿ ನೀಡುತ್ತೇವೆ’ ಎಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.