ಮಂಡ್ಯ: ‘ಸಿ.ಎಂ ಪ್ರಾಸಿಕ್ಯೂಶನ್ ಕುರಿತು ಪ್ರತಿಕ್ರಿಯಿಸುವುದಿಲ್ಲ. ಕಾನೂನು ಬಾಹಿರ ಚಟುವಟಿಕೆ ಮಾಡಿದ್ದರೆ, ನ್ಯಾಯಾಲಯ ತೀರ್ಪು ಕೊಡುತ್ತದೆ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಆದಿಚುಂಚನಗಿರಿ ಕ್ಷೇತ್ರದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ಬಿಜೆಪಿ ಹಮ್ಮಿಕೊಂಡಿದ್ದ ಮೈಸೂರು ಪಾದಯಾತ್ರೆಗೆ ನಾನೂ ಹೋಗಿದ್ದೆ, ಜನರನ್ನು ಜಾಗೃತರನ್ನಾಗಿಸುವ ಕೆಲಸ ಮಾಡಿದ್ದೇನೆ. ನನ್ನ ನೈತಿಕತೆ ಏನು ಅನ್ನೋದು ಸಾಬೀತಾಗಲಿ. ಯಾವುದೇ ತೀರ್ಮಾನವಾಗದಿ
ದ್ದರೂ ನನ್ನನ್ನು ಒಂದು ಪ್ರಕರಣದಲ್ಲಿ ಆರೋಪಿಯಾಗಿಸುತ್ತಿದ್ದಾರೆ. ಅವೆಲ್ಲಾ ಮುಗಿಯಲಿ, ನಂತರ ಮಾತನಾಡುತ್ತೇನೆ’ ಎಂದರು.

‘ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿರುವ ಬಗ್ಗೆ ಇನ್ನೂ ಅನುಮಾನವಿದೆ. ನಾನು ಕೇಂದ್ರ ಸಚಿವನಾಗಿರುವುದನ್ನು ಕೆಲವರಿಗೆ ಸಹಿಸಲಾಗುತ್ತಿಲ್ಲ. ನಾಲ್ಕೈದು ಮಂದಿ ಬೀಡಾಡಿ ಮಂತ್ರಿಗಳು ಆರೋಪ ಮಾಡಿದ್ದು, ಅವರಿಗೆ ಉತ್ತರ ಕೊಡುವ ಅಗತ್ಯವಿಲ್ಲ’ ಎಂದರು.

ಸಿ.ಎಂ ರಾಜೀನಾಮೆ ನೀಡಲಿ: ‘ಹೈಕೋರ್ಟ್ ಸತ್ಯ ಎತ್ತಿ ಹಿಡಿದಿದ್ದು, ಆದೇಶ ಸ್ವಾಗತಿಸಿಸುತ್ತೇವೆ. ಪಾರದರ್ಶಕ ತನಿಖೆ ನಡೆಯಲಿ. ಸಿ.ಎಂ ಕೈವಾಡ, ಅಧಿಕಾರ ದುರ್ಬಳಕೆ ಸ್ಪಷ್ಟವಾಗಿದೆ. ಸಿದ್ದರಾಮಯ್ಯ ರಾಜೀನಾಮೆಗೆ ಜನ ಆಗ್ರಹಿಸುತ್ತಿದ್ದಾರೆ’ ಎಂದು ಶಾಸಕ ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.
.ಮುಡಾ ಪ್ರಕರಣ: ಸಿದ್ದರಾಮಯ್ಯ ವಿರುದ್ಧ ತನಿಖೆಗೆ ದಾರಿ; ಮೇಲ್ಮನವಿಗೆ ತಯಾರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.