ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿಯನ್ನು ಹೊಗಳುವ ಮೂಲಕ ದೇವೇಗೌಡರು ಚಮಚಾಗಿರಿ ಮಾಡ್ತಿದ್ದಾರೆ: ಎಚ್‌.ವಿಶ್ವನಾಥ್

Published 19 ಫೆಬ್ರುವರಿ 2024, 11:57 IST
Last Updated 19 ಫೆಬ್ರುವರಿ 2024, 11:57 IST
ಅಕ್ಷರ ಗಾತ್ರ

ಮೈಸೂರು: ‘ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳುವ ಮೂಲಕ ಚಮಚಾಗಿರಿ ಮಾಡುತ್ತಿದ್ದಾರೆ’ ಎಂದು ವಿಧಾನಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್ ಟೀಕಿಸಿದರು.

ಇಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಸೋಮವಾರ ಪ್ರತಿಕ್ರಿಯಿಸಿದ ಅವರು, ‘ಜವಾಹರಲಾಲ್‌ ನೆಹರೂ, ಇಂದಿರಾ ಗಾಂಧಿ ಅವರಿಗಿಂತಲೂ ಮೋದಿ ಸಾಧನೆ ಮಾಡಿದ್ದಾರಾ?’ ಎಂದು ಕೇಳಿದರು.

‘ನೆಹರೂ, ಇಂದಿರಾ ಗಾಂಧಿ ಬಡತನ ನಿರ್ಮೂಲನೆ ಮಾಡಿ ದೇಶವನ್ನು ಅಭಿವೃದ್ಧಿ ಪಥದತ್ತ ತಂದಿದ್ದರು. ಆದರೆ, ದೇವೇಗೌಡರು ಮೋದಿಯನ್ನು ಕೊಂಡಾಡುತ್ತಿರುವುದು ವಿಪರ್ಯಾಸ. ಅವರಂತಹ ಹಿರಿಯ ನಾಯಕರಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಜಾತ್ಯತೀತ ಪದಕ್ಕೂ ಅವರು ತಿಲಾಂಜಲಿ ಇಟ್ಟಿದ್ದಾರೆ. ಮೋದಿಯಂತಹ ನಾಯಕನನ್ನು ಕಂಡಿರಲಿಲ್ಲ ಎಂದು ಹೇಳಿರುವುದು ಚಮಚಾಗಿರಿಯಲ್ಲದೇ ಬೇರೇನೂ ಅಲ್ಲ’ ಎಂದು ಹರಿಹಾಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT