ಬೆಂಗಳೂರು: ಗ್ರಾಮ ಆಡಳಿತ ಅಧಿಕಾರಿಗಳ ಒಂದು ಸಾವಿರ ಹುದ್ದೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಶುಲ್ಕ ₹500 ನಿಗದಿ ಮಾಡಿರುವುದಕ್ಕೆ ಅಂಗವಿಕಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಲೋಕಸೇವಾ ಆಯೋಗ, ಸಿಬ್ಬಂದಿ ನೇಮಕಾತಿ ಆಯೋಗ ಸೇರಿದಂತೆ ಹಲವು ನೇಮಕಾತಿ ಸಂಸ್ಥೆಗಳು ನೇಮಕಾತಿ ಪ್ರಕ್ರಿಯೆಯಲ್ಲಿ ಅಂಗವಿಕಲರಿಗೆ ಅತ್ಯಂತ ಕನಿಷ್ಠ ಅರ್ಜಿ ಶುಲ್ಕ (₹100) ನಿಗದಿ ಮಾಡುತ್ತವೆ. ಆದರೆ, ಕೆಇಎ ದುಬಾರಿ ಶುಲ್ಕ ನಿಗದಿ ಮಾಡಿದೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ₹750 ಇದ್ದರೆ, ಪರಿಶಿಷ್ಟರು, ಅಂಗವಿಕಲರಿಗೆ ₹500 ಇದೆ. ತಕ್ಷಣ ತಿದ್ದುಪಡಿ ಮಾಡಿ, ಮರು ಅಧಿಸೂಚನೆ ಹೊರಡಿಸಬೇಕು ಎಂದು ರವಿ, ನಾಗರಾಜ್, ಕುಮಾರ್ ಮತ್ತಿತರರು ಒತ್ತಾಯಿಸಿದ್ದಾರೆ.

ದ್ವಿತೀಯ ಪಿಯು ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಪ್ರಾಧಿಕಾರದ ಜಾಲತಾಣ http://kea.kar.nic.in ಬಳಸಿಕೊಂಡು ಮಾರ್ಚ್ 4ರಿಂದ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಏ.3 ಕೊನೆಯ ದಿನ. ತಲಾ 100 ಅಂಕಗಳಿಗೆ ಎರಡು ಪತ್ರಿಕೆಗಳಿದ್ದು, ಮೊದಲನೆ ಪತ್ರಿಕೆ ಸಾಮಾನ್ಯ ಜ್ಞಾನ ಹಾಗೂ ಎರಡನೇ ಪತ್ರಿಕೆ ಕನ್ನಡ, ಇಂಗ್ಲಿಷ್ ಹಾಗೂ ಕಂಪ್ಯೂಟರ್ ಜ್ಞಾನ ಒಳಗೊಂಡಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.