ಭಾರತೀಯ ನ್ಯಾಯ ಸಂಹಿತೆಯ 196 ಮತ್ತು 266ನೇ ಸೆಕ್ಷನ್‌ಗಳಲ್ಲಿ ದ್ವೇಷ ಭಾಷಣದಂತಹ ಅಪರಾಧಗಳನ್ನು ವ್ಯಾಖ್ಯಾನಿಸಲಾಗಿದೆ. ಅಂಥದ್ದೇ ಅಪರಾಧಗಳಿಗೆ ಮತ್ತೊಂದು ಕಾನೂನು ಏಕೆ ಬೇಕು?
-ವಿವೇಕ್ ಸುಬ್ಬಾರೆಡ್ಡಿ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ
ಈ ಮಸೂದೆ ಜಾರಿಯಾದರೆ ಪೊಲೀಸರ ಮೇಲೆ ಒತ್ತಡ ಹೆಚ್ಚಲಿದೆ. ದ್ವೇಷ ಭಾಷಣ ಕೃತ್ಯವನ್ನು ಯಾವ ಕಾನೂನಿನಲ್ಲಿ ಪರಿಗಣಿಸಬೇಕು ಮತ್ತು ಪ್ರಕರಣ ದಾಖಲಿಸಬೇಕು ಎಂಬ ಗೊಂದಲವೂ ಸೃಷ್ಟಿಯಾಗಲಿದೆ
-ಜ್ಯೋತಿ ಪ್ರಕಾಶ್‌ಮಿರ್ಜಿ ನಿವೃತ್ತ ಐಪಿಎಸ್ ಅಧಿಕಾರಿ
ಈ ಮಸೂದೆಯನ್ನು ಸಿದ್ಧಪಡಿಸುವಾಗ ರಾಜ್ಯ ಸರ್ಕಾರವು ವ್ಯಕ್ತಿ ಸ್ವಾತಂತ್ರ್ಯ ಮತ್ತು ಅದರ ಮಹತ್ವವನ್ನು ಮರೆತಿರುವಂತಿದೆ. ಜನರು ತಮ್ಮ ಅಭಿಪ್ರಾಯವನ್ನು ವ್ಯಕ್ತಿಪಡಿಸಲು ಸಾಧ್ಯವೇ ಇಲ್ಲದಂತ ಸ್ಥಿತಿ ಸರಿಯಲ್ಲ