ಮೈಸೂರು: ‘ಹಾವೇರಿಯಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪುಸ್ತಕ ಮಳಿಗೆಗಳಲ್ಲಿ ಕನ್ನಡ ಹೊರತುಪಡಿಸಿ ಬೇರೆ ಯಾವುದೇ ಭಾಷೆಯ ಪುಸ್ತಕಗಳಿಗೆ ಅವಕಾಶ ನೀಡುವುದಿಲ್ಲ’ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ಹೇಳಿದರು.

ಕನ್ನಡ ಪುಸ್ತಕ ಪ್ರಾಧಿಕಾರ ಮಂಗಳವಾರ ಇಲ್ಲಿ ಆಯೋಜಿಸಿದ್ದ ಪ್ರಕಾಶಕರ ದ್ವಿತೀಯ ಸಮ್ಮೇಳನದಲ್ಲಿ ಮಾತನಾಡಿ, ‘ಸಮ್ಮೇಳನಕ್ಕೆ ₹ 20 ಕೋಟಿ ಅನುದಾನ ಲಭಿಸಿದ್ದು, ದುಂದು ವೆಚ್ಚ ಮಾಡುವುದಿಲ್ಲ’ ಎಂದರು.

‘ಕನ್ನಡ ಪುಸ್ತಕಗಳಲ್ಲಿ ವ್ಯಾಕರಣ ದೋಷ ಹೆಚ್ಚಿದೆ. ಕರಡು ತಿದ್ದುವವರಿಗೆ ಹಾಗೂ ಲೇಖಕರಿಗೆ ಪುಸ್ತಕ ಪ್ರಾಧಿಕಾರ ಕಾರ್ಯಾಗಾರವನ್ನು ನಡೆಸಬೇಕು. 1977ರ ಬಳಿಕ ರಾಷ್ಟ್ರೀಯ ಪುಸ್ತಕ ಮೇಳ ರಾಜ್ಯದಲ್ಲಿ ನಡೆಯದೇ ಇರುವುದರಿಂದ, ಮೇಳ ನಡೆಸಲು ಪ್ರಾಧಿಕಾರ ಪ್ರಯತ್ನಿಸಿದರೆ ಸಹಕಾರ ನೀಡಲಾಗುವುದು. ಹಾವೇರಿ ಸಮ್ಮೇಳನದ ಬಳಿಕ ಕನ್ನಡ ಪುಸ್ತಕ ಪ್ರಕಾಶಕರ ಹಾಗೂ ಮಾರಾಟಗಾರರ ರಾಜ್ಯಮಟ್ಟದ ಸಮ್ಮೇಳನವನ್ನು ನಡೆಸಲಾಗುವುದು’ ಎಂದು ಅವರು ಹೇಳಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.