ಬೆಂಗಳೂರು: ‘ನನಗೆ ಯಾವನ್ರೀ ಧಮ್ಕಿ ಹಾಕೋನು? ನನ್ನ ಹಿಂದೆ ಇಡೀ ದಲಿತ ಸಮುದಾಯ ಇದೆ’ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಅಬ್ಬರದ ದನಿಯಲ್ಲಿ ಹೇಳಿದರು.

ಮಾಜಿ ಸಂಸದ ಡಿ.ಕೆ. ಸುರೇಶ್ ಅವರು ಮಹದೇವಪ್ಪ ಅವರಿಗೆ ಫೋನ್ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂಬ ವದಂತಿಗಳ ಬಗ್ಗೆ ಸುದ್ದಿ ಮಾಧ್ಯಮವೊಂದಕ್ಕೆ ಮಂಗಳವಾರ ಪ್ರತಿಕ್ರಿಯಿಸಿದ ಅವರು, ‘ಅಂಥದ್ದೇನೂ ಇಲ್ವಲ್ಲ ರೀ. ಅಷ್ಟಕ್ಕೂ ಡಿ.ಕೆ. ಸುರೇಶ್ ಎಂದೂ ನನಗೆ ಫೋನ್ ಮಾಡಿಲ್ಲ’ ಎಂದರು.

‘ಇಂತಹ ಯಾವುದೇ ಪ್ರಸಂಗ ನಡೆದೇ ಇಲ್ಲ’ ಎಂದು ಸ್ಪಷ್ಟಪಡಿಸಿದ ಅವರು, ‘ವಿಥ್ ಔಟ್ ಎನಿಥಿಂಗ್ ಇದೆಲ್ಲ ಆಗಬಾರದು. ಸಾಮಾಜಿಕ ಜಾಲತಾಣಗಳಲ್ಲಿ ಏನು ನಡೆಯುತ್ತಿದೆಯೊ ಅದರ ಬಗ್ಗೆ ಗೊತ್ತಿಲ್ಲ’ ಎಂದರು.

‘ನಾನು ಮತ್ತು ಡಿ.ಕೆ. ಸುರೇಶ್ ಮಾತನಾಡಿಯೇ ಇಲ್ಲ. ಇನ್ನು ಅದೇಕೆ ಈ ರೀತಿ ಮಾಡ್ತಾರೆ. ಸುಮ್ಮನೆ ಈ ರೀತಿ ಮಾಹಿತಿ ಹರಡುವುದರಿಂದ ಸಮಾಜ ಹಾಳಾಗುತ್ತದೆ’ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.