ಶೇಂಗಾ, ಈರುಳ್ಳಿಗೆ ಹಾನಿ
ಚಿತ್ರದುರ್ಗ ಜಿಲ್ಲೆಯಲ್ಲಿ ಭಾನುವಾರ ರಾತ್ರಿ ಧಾರಾಕಾರ ಮಳೆಯಾಗಿದ್ದು, ಸುರಿದಿದ್ದು ಹಳ್ಳ, ಕೊಳ್ಳ ಕೋಡಿಬಿದ್ದಿವೆ. ಈರುಳ್ಳಿ, ಶೇಂಗಾ, ಟೊಮೆಟೊ ಬೆಳೆಗೆ ಹಾನಿ ಆಗಿದೆ. ಹಿರಿಯೂರು ತಾಲ್ಲೂಕು ವ್ಯಾಪ್ತಿಯ ಅರಳೀಕೆರೆ, ಶ್ರವಣಗೆರೆ, ಹಲಗಲದ್ದಿ, ಹೊಸಕೆರೆ ವೇಣುಕಲ್ಲುಗುಡ್ಡ ಭಾಗದಲ್ಲಿ ಚೆಕ್ ಡ್ಯಾಂ, ಗೋಕಟ್ಟೆಗಳು ತುಂಬಿ ಹರಿಯುತ್ತಿವೆ. ಚಿಕ್ಕಜಾಜೂರು ಸಮೀಪದ ಚಿಕ್ಕಂದವಾಡಿ, ಅರಸನಘಟ್ಟ, ಹನುಮನಕಟ್ಟೆ ಭಾಗದಲ್ಲಿ ಉತ್ತಮ ಮಳೆಯಾಗಿದ್ದು ಕೆರೆ, ಕಟ್ಟೆಗಳಲ್ಲಿ ನೀರು ಹರಿಯುತ್ತಿದೆ.