ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಧ್ವಜದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ್ದು ದೇಶದ್ರೋಹವಲ್ಲವೇ?: ಬಿಜೆಪಿ

Last Updated 18 ಫೆಬ್ರುವರಿ 2022, 8:15 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರಧ್ವಜದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿ ರಾಜಕೀಯಕ್ಕಾಗಿ ತ್ರಿವರ್ಣಧ್ವಜವನ್ನು ಬಳಸಿದ್ದು ದೇಶದ್ರೋಹವಲ್ಲದೇ ಮತ್ತೇನು ಎಂದು ಕಾಂಗ್ರೆಸ್‌ ಅನ್ನು ಉದ್ದೇಶಿಸಿ ಬಿಜೆಪಿ ಪ್ರಶ್ನಿಸಿದೆ.

ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ರಾಷ್ಟ್ರಧ್ವಜವೇ ಇರದಿದ್ದ ಸ್ಥಂಭದಲ್ಲಿ, ರಾಷ್ಟ್ರಧ್ವಜವನ್ನು ಇಳಿಸಿ ಕೇಸರಿ ಧ್ವಜ ಹಾರಿಸಲಾಗಿದೆ ಎಂಬ ಸುಳ್ಳು ಸುದ್ದಿ ಹಬ್ಬಿಸಿದ್ದು ತಿರಂಗಕ್ಕೆ ಮಾಡಿದ ಅವಮಾನವಲ್ಲವೇ? ತಿರಂಗಕ್ಕೆ ಅವಮಾನ ಮಾಡಿ, ಸದನದಲ್ಲಿ ರಾಜಕೀಯ ಕಾರಣಕ್ಕಾಗಿ ತಿರಂಗ ಬಳಸಿದ್ದು ದೇಶದ್ರೋಹವಲ್ಲದೆ ಮತ್ತೇನು’ ಎಂದು ಉಲ್ಲೇಖಿಸಿದೆ.

‘ಹಿಜಾಬ್‌ ಪರವಾಗಿರುವ ಕಾಂಗ್ರೆಸ್‌, ಶೈಕ್ಷಣಿಕ ವಾತಾವರಣದಲ್ಲಿ ಹಿಜಾಬ್‌ ಧರಿಸಲು ಅವಕಾಶ ನಿರಾಕರಿಸುವುದೇ ಆದಲ್ಲಿ, ಹಿಂದೂಗಳು ಕುಂಕುಮ ಇಡಬಾರದು, ಬಳೆ, ಹೂವು ಮುಡಿಯಬಾರದು ಎನ್ನುವ ಅಸಮಂಜಸ ವಾದವನ್ನು ಸಮಾಜದ ಮುಂದಿಡುತ್ತಿದೆ. ಹಿಂದೂ ಸಂಸ್ಕೃತಿ, ಹಿಂದೂಗಳ ಬಗ್ಗೆ ಕಾಂಗ್ರೆಸ್‌ ಪಕ್ಷಕ್ಕೇಕೆ ಇಷ್ಟೊಂದು ಅಸಹನೆ’ ಎಂದು ಬಿಜೆಪಿ ಪ್ರಶ್ನಿಸಿದೆ.

‘ಹಿಜಾಬ್‌ ವಿವಾದ ನ್ಯಾಯಾಲಯದ ಮೆಟ್ಟಿಲೇರುವ ಹಿಂದೆ ಕಾಂಗ್ರೆಸ್‌ ಪಕ್ಷದ ಶ್ರಮವಿದೆ. ಕಾಂಗ್ರೆಸ್‌ ಪಕ್ಷದ ಪದಾಧಿಕಾರಿಗಳೇ ಹಿಜಾಬ್‌ ಪರವಾಗಿ ನ್ಯಾಯಾಲಯಕ್ಕೆ ಅರ್ಜಿಯ ಮೇಲೆ ಅರ್ಜಿ ಸಲ್ಲಿಸುತ್ತಿದ್ದಾರೆ. ಕಾಂಗ್ರೆಸ್ ಹಿಜಾಬ್‌ ಪರವಾಗಿ ಇರುವುದಕ್ಕಿಂತ ಹೆಚ್ಚಾಗಿ ಕುಂಕುಮ, ಬಳೆ, ಹೂವು ಮುಡಿಯುವುದರ ವಿರುದ್ಧವಿದೆ’ ಎಂದು ‌#ಹಿಂದೂವಿರೋಧಿಕಾಂಗ್ರೆಸ್‌ ಎಂಬ ಹ್ಯಾಷ್‌ಟ್ಯಾಗ್‌ನೊಂದಿಗೆ ಬಿಜೆಪಿ ಟ್ವೀಟ್ ಮಾಡಿದೆ.

‘ಹಿಜಾಬ್ ಪರವಾಗಿ ಕೆಪಿಸಿಸಿ ಕಚೇರಿಯಿಂದಲೇ ಸೂಚಿತವಾಗಿರುವ ವ್ಯಕ್ತಿಗಳು ನ್ಯಾಯಾಲಯದಲ್ಲಿ ವಾದ ಮಂಡಿಸುತ್ತಿದ್ದಾರೆ. ಹಿಜಾಬ್‌ ಧರಿಸಲು ಅವಕಾಶ ಇಲ್ಲವಾದರೆ, ಹಿಂದೂ ಧರ್ಮೀಯರು ಕೂಡಾ ಬಳೆ, ಹೂವು, ಕುಂಕುಮ ಇಡಬಾರದಂತೆ! ಹಿಂದೂ ಧರ್ಮ ಈ ನೆಲದ ಸಂಸ್ಕೃತಿ, ಅದನ್ನೇ ಇಂದು ಕಾಂಗ್ರೆಸ್‌ ವಿರೋಧಿಸುತ್ತಿದೆ’ ಎಂದು ಬಿಜೆ‍ಪಿ ಟೀಕಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT