ಚೆನ್ನೈ, ಅಹಮದಾಬಾದ್‌ನಲ್ಲೂ ಪತ್ತೆ
ಚೆನ್ನೈ/ಅಹಮದಾಬಾದ್ (ಪಿಟಿಐ): ಚೆನ್ನೈನಲ್ಲಿ ಎರಡು ಮತ್ತು ಅಹಮದಾಬಾದ್‌ನಲ್ಲಿ ಒಂದು ಹ್ಯೂಮನ್ ಮೆಟಾನ್ಯುಮೋವೈರಸ್ (ಎಚ್‌ಎಂಪಿವಿ) ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಅಹಮದಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಎರಡು ತಿಂಗಳ ಮಗುವಿನಲ್ಲಿ ಎಚ್‌ಎಂಪಿವಿ ಪತ್ತೆಯಾಗಿದೆ. ರಾಜಸ್ಥಾನದ ಡುಂಗರ್‌ಪುರದ ಮಗುವಿನಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡದ್ದರಿಂದ ಇಲ್ಲಿನ ಚಾಂದ್‌ಖೇಡಾ ಪ್ರದೇಶದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿತ್ತು.
‘ಮಗುವನ್ನು ಪರೀಕ್ಷೆಗೆ ಒಳಪಡಿಸಿದಾಗ ಎಚ್‌ಎಂಪಿವಿ ಇರುವುದು ಪತ್ತೆಯಾಗಿದೆ. ಎಚ್‌ಎಂಪಿವಿ ಇರುವುದು ಡಿ.26ರಂದೇ ಪತ್ತೆಯಾಗಿದ್ದರೂ, ಆಸ್ಪತ್ರೆಯವರು ನಮಗೆ ತಡವಾಗಿ ಮಾಹಿತಿ ನೀಡಿದ್ದಾರೆ’ ಎಂದು ಅಹಮದಾಬಾದ್ ನಗರ ಪಾಲಿಕೆಯ ವೈದ್ಯಾಧಿಕಾರಿ ಭವಿನ್ ಸೋಳಂಕಿ ತಿಳಿಸಿದ್ದಾರೆ.