ಬೆಂಗಳೂರು: 'ನನ್ನನ್ನು ಹನಿಟ್ರ್ಯಾಪ್ ಮಾಡಲು ಪ್ರಯತ್ನ ನಡೆದಿರುವ ಕುರಿತು ಸಂಜೆ 4.30ಕ್ಕೆ ಗೃಹ ಸಚಿವ ಜಿ. ಪರಮೇಶ್ವರ ಅವರನ್ನುವ ಭೇಟಿಮಾಡಿ ದೂರು ಸಲ್ಲಿಸುತ್ತೇನೆ' ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದರು.

ದೂರಿನ ಪ್ರತಿಯೊಂದಿಗೆ ಬೆಂಗಳೂರಿಗೆ ಬರುತ್ತಿರುವ ಅವರು ಪರಮೇಶ್ವರ ಅವರು ನೆಲಮಂಗಲದ ಸಮೀಪದ ಟಿ. ಬೇಗೂರಿನಲ್ಲಿರುವ ವಿಷಯ ತಿಳಿದು ಮಂಗಳವಾರ ಮಧ್ಯಾಹ್ನ ಅಲ್ಲಿಯೇ ಗೃಹ ಸಚಿವರನ್ನು ಭೇಟಿಮಾಡಿದರು. ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು.

'ತಮ್ಮ ಮನೆಗೆ ಬಂದು ಭೇಟಿ ಮಾಡುವಂತೆ ಗೃಹ ಸಚಿವರು ಸೂಚಿಸಿದ್ದಾರೆ. ಅಲ್ಲಿಗೆ ಹೋಗಿ ದೂರು ನೀಡುವೆ' ಎಂದು ರಾಜಣ್ಣ ತಿಳಿಸಿದರು.

'ದೂರು ಸಲ್ಲಿಸಿದ ಬಳಿಕ ಅದರ ಪ್ರತಿಯನ್ನು ಮಾಧ್ಯಮಗಳಿಗೂ ನೀಡುವೆ. ತನಿಖೆಯ ವಿಚಾರದಲ್ಲಿ ಗೃಹ ಸಚಿವರು ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎಂಬುದನ್ನು ಎರಡು ದಿನ ಕಾದು ನೋಡುವೆ' ಎಂದರು.

ಹನಿಟ್ರ್ಯಾಪ್ ಯತ್ನದ ಹಿಂದೆ ಇರುವವರು ಯಾರು ಎಂಬುದನ್ನು ಈಗಲೇ ಹೇಳುವುದು ಕಷ್ಟ. ಆ ವ್ಯಕ್ತಿಗಳನ್ನು ಪತ್ತೆ ಹಚ್ಚುವುದಕ್ಕಾಗಿ ತನಿಖೆಯ ಅಗತ್ಯವಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
.ಅಪರಿಚಿತರಿಂದ ಹನಿಟ್ರ್ಯಾಪ್ಗೆ ಯತ್ನ: ನನ್ನ ಬಳಿ ಯಾವುದೇ ದಾಖಲೆಗಳಿಲ್ಲ– ರಾಜಣ್ಣ.ಹನಿಟ್ರ್ಯಾಪ್ | ಸೂಕ್ತ ಸಮಯದಲ್ಲಿ ದೂರು: ಕೆ.ಎನ್. ರಾಜಣ್ಣ.ಮಧುಬಲೆ ಪ್ರಕರಣ: ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ .Honey Trap | ಮಧುಬಲೆ: ಹೈಕಮಾಂಡ್ ಗರಂ, ಖರ್ಗೆ-ಸಿಎಂ ರಹಸ್ಯ ಚರ್ಚೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.