ಮಂಗಳವಾರ, 29 ಜುಲೈ 2025
×
ADVERTISEMENT
ADVERTISEMENT

KPSC ಕಾರ್ಯದರ್ಶಿಯಾಗಿ ಐಎಎಸ್‌ ಅಧಿಕಾರಿ ಜಾನಕಿ ಕೆ.ಎಂ ನೇಮಕ

Published : 17 ಜೂನ್ 2025, 20:02 IST
Last Updated : 17 ಜೂನ್ 2025, 20:02 IST
ಫಾಲೋ ಮಾಡಿ
0
KPSC ಕಾರ್ಯದರ್ಶಿಯಾಗಿ ಐಎಎಸ್‌ ಅಧಿಕಾರಿ ಜಾನಕಿ ಕೆ.ಎಂ ನೇಮಕ
ಕೆ.ಎಂ. ಜಾನಕಿ

ಬೆಂಗಳೂರು: ಐಎಎಸ್‌ ಅಧಿಕಾರಿ ಜಾನಕಿ ಕೆ.ಎಂ ಅವರನ್ನು ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಹುದ್ದೆಗೆ ವರ್ಗಾವಣೆ  ಮಾಡಲಾಗಿದೆ. ಇದರ ಜತೆಗೆ, ಒಟ್ಟು 16 ಐಎಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

ADVERTISEMENT
ADVERTISEMENT

ಸತ್ಯಭಾಮಾ–ಯೋಜನಾ ನಿರ್ದೇಶಕಿ, ರಾಜ್ಯ ಸಮಗ್ರ ಶಿಕ್ಷಣ. ಲತಾಕುಮಾರಿ ಕೆ.ಎಸ್‌– ಜಿಲ್ಲಾಧಿಕಾರಿ, ಹಾಸನ. ಸ್ವರೂಪ ಟಿ.ಕೆ– ಜಿಲ್ಲಾಧಿಕಾರಿ, ಉಡುಪಿ. ಅವಿನಾಶ್‌ ಮೆನನ್‌ ರಾಜೇಂದ್ರನ್‌– ನಿರ್ದೇಶಕ, ನ್ಯಾಷನಲ್‌ ಹೆಲ್ತ್‌ ಮಿಷನ್‌ ನಿರ್ದೇಶನಾಲಯ. ಮುಲ್ಲೈ ಮುಹಿಲನ್ ಎಂ.ಪಿ– ಆಯುಕ್ತ, ನೋಂದಣಿ ಮತ್ತು ಮುದ್ರಾಂಕ ಇಲಾಖೆ. ನಳಿನಿ ಅತುಲ್– ಕಾರ್ಯದರ್ಶಿ, ಕೆಕೆಆರ್‌ಡಿಬಿ, ಕಲಬುರ್ಗಿ.

ದರ್ಶನ್‌ ಎಚ್‌.ವಿ– ಜಿಲ್ಲಾಧಿಕಾರಿ, ದಕ್ಷಿಣಕನ್ನಡ. ಸಂಗಪ್ಪ– ಜಿಲ್ಲಾಧಿಕಾರಿ, ಬಾಗಲಕೋಟೆ. ಸುರೇಶ್‌ ಬಿ. ಇಟ್ನಾಳ– ಜಿಲ್ಲಾಧಿಕಾರಿ, ಕೊಪ್ಪಳ. ನವೀನ್‌ ಭಟ್‌ ವೈ– ಸಿಇಓ, ಜಿಲ್ಲಾಪಂಚಾಯಿತಿ. ಚಿಕ್ಕಬಳ್ಳಾಪುರ, ಗರಿಮಾ ಪನ್ವಾರ್‌– ವ್ಯವಸ್ಥಾಪಕ ನಿರ್ದೇಶಕಿ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ. ರಾಹುಲ್ ರತ್ನಂ ಪಾಂಡೆ–ಕಾರ್ಯನಿರ್ವಾಹಕ ನಿರ್ದೇಶಕ, ಸೆಂಟರ್‌ ಫಾರ್ ಸ್ಮಾರ್ಟ್‌ ಗವರ್ನೆನ್ಸ್‌. ಪ್ರಕಾಶ್‌ ಜಿ.ಟಿ ನಿಟ್ಟಾಲಿ– ನಿರ್ದೇಶಕ, ಶಿಕ್ಷಣ ಇಲಾಖೆ (ಬಿಸಿಯೂಟ). ವರ್ನಿತ್‌ ನೇಗಿ– ಸಿಇಓ, ಜಿಲ್ಲಾಪಂಚಾಯಿತಿ, ಕಲಬುರಗಿ. ಗಿಟ್ಟೆ ಮಾಧವ್ ವಿಠಲರಾವ್‌–ಸಿಇಓ, ಜಿಲ್ಲಾಪಂಚಾಯಿತಿ, ದಾವಣಗೆರೆ.

ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಕಾರ್ಯದರ್ಶಿ ಶಮ್ಲಾ ಇಕ್ಬಾಲ್ ಅವರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಹುದ್ದೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.

ADVERTISEMENT

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಅಧ್ಯಕ್ಷ ಬಸವರಾಜೇಂದ್ರ ಎಚ್‌ ಅವರನ್ನು ಸರ್ಕಾರಿ ವೈಮಾನಿಕ ತರಬೇತಿ ಶಾಲೆ, ಜಕ್ಕೂರು ಇದರ ನಿರ್ದೇಶಕ ಹುದ್ದೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
Comments0