ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮ್‌ ಪ್ರಸಾತ್ ಮನೋಹರ್‌ ಸೇರಿ ಐಎಎಸ್‌ ಅಧಿಕಾರಿಗಳ ವರ್ಗಾವಣೆ

Published : 28 ಆಗಸ್ಟ್ 2024, 16:16 IST
Last Updated : 28 ಆಗಸ್ಟ್ 2024, 16:16 IST
ಫಾಲೋ ಮಾಡಿ
Comments

ಬೆಂಗಳೂರು: ಹುದ್ದೆ ನಿರೀಕ್ಷಣೆಯಲ್ಲಿದ್ದ ಜಿ. ಸತ್ಯವತಿ ಅವರಿಗೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಹುದ್ದೆ ನೀಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ.

ಆರೋಗ್ಯ ಇಲಾಖೆಯ ಆಯುಕ್ತರನ್ನಾಗಿ ಕೆ.ಬಿ. ಶಿವಕುಮಾರ್‌ ಅವರನ್ನು ವರ್ಗಾವಣೆ ಮಾಡಲಾಗಿದೆ. ರಾಜ್ಯ ವಿಕೋಪ ನಿರ್ವಹಣಾ ಪ್ರಾಧಿಕಾರದ ಆಯುಕ್ತ ಹುದ್ದೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.

ವರ್ಗಾವಣೆಯಾದವರು: ವಿ. ರಾಮ್‌ ಪ್ರಸಾತ್ ಮನೋಹರ್‌ – ಅಧ್ಯಕ್ಷ, ಬೆಂಗಳೂರು ಜಲಮಂಡಳಿ. ಡಿ.ಎಸ್‌. ರಮೇಶ್ –ನಿರ್ದೇಶಕ, ತೋಟಗಾರಿಕಾ ಇಲಾಖೆ. ಎಂ.ಆರ್. ರವಿಕುಮಾರ್‌ – ಆಯುಕ್ತ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಆಯುಕ್ತಾಲಯ.

ಎಂ.ಎಸ್‌. ಅರ್ಚನಾ–ಪಶ್ಚಿಮ ವಲಯ ಆಯುಕ್ತೆ, ಬಿಬಿಎಂಪಿ. ಎಸ್‌. ನವೀನ್‌ ಕುಮಾರ್‌ ರಾಜು – ಕಾರ್ಯನಿರ್ವಾಹಕ ನಿರ್ದೇಶಕ, ರಾಜ್ಯ ಖನಿಜ ನಿಗಮ. ಗರಿಮಾ ಪನ್ವಾರ್‌–ನಿರ್ದೇಶಕಿ, ಡಿಜಿಟಲ್‌ ಆರೋಗ್ಯ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ. ಪಾಟೀಲ್‌ ಭುವನೇಶ್‌ ದೇವದಾಸ್‌– ಸಿಇಒ, ಜಿಲ್ಲಾ ಪಂಚಾಯತಿ, ಕೋಲಾರ. ಸದಾಶಿವ ಪ್ರಭು ಬಿ.– ನಿರ್ದೇಶಕ, ಬಿಎಂಟಿಸಿ (ಭದ್ರತೆ ಮತ್ತು ಜಾಗೃತಿ). ಲಾವಿಶ್‌ ಒರ್ಡಿಯಾ– ಸಿಇಒ, ಜಿಲ್ಲಾ ಪಂಚಾಯತಿ, ಯಾದಗಿರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT