ಧಾರವಾಡ: ‘ರಾಷ್ಟ್ರೀಯ ಸ್ವಯಂ ಸೇವಕ ಸಂಘ ಅಪೇಕ್ಷಿಸುವ ನಿಲುವು ಹಾಗೂ ಹಿಂದೂಪರ ನೀತಿಯನ್ನು ಕಾಂಗ್ರೆಸ್ ಪಕ್ಷ ಅಳವಡಿಸಿಕೊಂಡರೆ ಚುನಾವಣೆಯಲ್ಲಿ ಅವರ ಪರವಾಗಿಯೂ ಆರೆಸ್ಸೆಸ್ ಕೆಲಸ ಮಾಡಲಿದೆ’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಪ್ರಚಾರ ಪ್ರಮುಖ ಅರುಣಕುಮಾರ ಹೇಳಿದರು.

ನಗರದಲ್ಲಿ ಭಾನುವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ನಾಯಕರು ರಾಮಮಂದಿರ ನಿರ್ಮಾಣದ ಪರವಾಗಿಹಾಗೂ ಜಮ್ಮು ಕಾಶ್ಮೀರಕ್ಕೆ ನೀಡಿದ್ದ 370ನೇ ವಿಧಿಯನ್ನು ಕಿತ್ತು ಹಾಕುವು ದಾಗಿ ಘೋಷಣೆ ಮಾಡಿ, ಹಿಂದೂಪರ ನಿಲುವು ಹೊಂದಿದ್ದರೆ ಆರೆಸ್ಸೆಸ್ಸ್ ಅವರ
ಜೊತೆಗಿದ್ದು ಅವರ ಪರವಾಗಿ ಕೆಲಸ ಮಾಡುತ್ತಿತ್ತು. ಈ ಹಿಂದೆಯೇ ಸಂಘದ ಸರಸಂಚಾಲಕರು ಈ ಹೇಳಿಕೆ ನೀಡಿದ ಉದಾಹರಣೆಗಳಿವೆ’ ಎಂದರು.

‘ನಮ್ಮ ನಿಲುವುಗಳನ್ನು ಬಿಜೆಪಿ ಒಪ್ಪಿಕೊಂಡಿದ್ದರಿಂದ ಅದರ ಜೊತೆಗೆ ಕೆಲಸ ಮಾಡುತ್ತಿದ್ದೇವೆ. ಹೀಗಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ರಾಜೀನಾಮೆ ನೀಡಬೇಕಾದರೂ ಆರ್‌ಎಸ್ಎಸ್ ನೇಮಿ
ಸಿದ ಪಕ್ಷದ ಸಂಘಟನಾ ಕಾರ್ಯದರ್ಶಿಗೆ ಪತ್ರ ನೀಡುವ ನಿಯಮವಿದೆ. ಆದ್ದರಿಂದ ಆರ್‌ಎಸ್ಎಸ್ ಹಾಕಿದ ಗೆರೆ ದಾಟುವ ಬಗ್ಗೆ ಬಿಜೆಪಿ ಯೋಚನೆ ಕೂಡ ಮಾಡುವುದಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.