ಉಡುಪಿ: ಕಾರ್ಕಳ ತಾಲ್ಲೂಕಿನಲ್ಲಿ ವರ್ಷದ ಹಿಂದೆ ಸಾವನ್ನಪ್ಪಿದ್ದ ಎರಡು ಚಿರತೆಗಳು, ಹಸಿವಿನಿಂದ ಮೃತಪಟ್ಟಿರುವುದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ದೃಢಪಟ್ಟಿದೆ ಎಂದು ಕಾರ್ಕಳ ವಲಯ ಅರಣ್ಯಾಧಿಕಾರಿ ದಿನೇಶ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

2017ರ ಡಿಸೆಂಬರ್‌ನಲ್ಲಿ ಬೈಲೂರು ಸಮೀಪದ ಯರ್ಲಪಾಡಿ ಹಾಗೂ ಎಳ್ಳಾರೆ ಎಂಬಲ್ಲಿ 2 ಚಿರತೆಗಳು ಮೃತಪಟ್ಟಿದ್ದವು. ಕೇವಲ 2 ಕಿ.ಮೀ ಅಂತದಲ್ಲಿ ಎರಡು ಚಿರತೆಗಳು ಸತ್ತಿದ್ದರಿಂದ ಸಾವಿನ ಬಗ್ಗೆ ಸಂಶಯ ಮೂಡಿತ್ತು. ಯಾರಾದರೂ ವಿಷ ಹಾಕಿ ಚಿರತೆಗಳನ್ನು ಕೊಂದಿರಬಹುದು, ಇಲ್ಲವೇ ಕಾಯಿಲೆಯಿಂದ ಮೃತಪಟ್ಟಿರಬಹುದು ಎಂಬ ಅನುಮಾನ ವ್ಯಕ್ತವಾಗಿತ್ತು.

ಹಾಗಾಗಿ, ಕಳೇಬರವನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅಲ್ಲಿಪರೀಕ್ಷೆ ನಡೆಸಿದಾಗ ಚಿರತೆಗಳ ಹೊಟ್ಟೆ ಖಾಲಿಯಾಗಿರುವುದು ಕಂಡು ಬಂದಿತ್ತು. ಇದರ ಆಧಾರದ ಮೇಲೆ ಹಸಿವಿನಿಂದ ಮೃತಪಟ್ಟಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ ಎಂದು ಆರ್‌ಎಫ್‌ಒ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.