ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈರುತ್ಯ ರೈಲ್ವೆಯ ಎಲ್ಲ ನಿಲ್ದಾಣಗಳಲ್ಲಿ ವೈ–ಫೈ

Last Updated 24 ಆಗಸ್ಟ್ 2019, 17:16 IST
ಅಕ್ಷರ ಗಾತ್ರ

ಹುಬ್ಬಳ್ಳಿ:ನೈರುತ್ಯ ರೈಲ್ವೆಯು ತನ್ನ ವಲಯ ವ್ಯಾಪ್ತಿಯ ಎಲ್ಲ ನಿಲ್ದಾಣಗಳಲ್ಲಿ (ಸಿಬ್ಬಂದಿ ಇಲ್ಲದ ಸಣ್ಣ ನಿಲ್ದಾಣಗಳನ್ನುಹೊರತುಪಡಿಸಿ) ಉಚಿತ ವೈ–ಫೈ ಸೌಲಭ್ಯ ಒದಗಿಸಿದ್ದು, ಭಾರತೀಯ ರೈಲ್ವೆ ಇಲಾಖೆಯಲ್ಲಿಈ ಸಾಧನೆ ಮಾಡಿದ ಮೊದಲ ವಲಯ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಹುಬ್ಬಳ್ಳಿ ವಿಭಾಗದಲ್ಲಿ 98, ಬೆಂಗಳೂರು ವಿಭಾಗದಲ್ಲಿ 95 ಹಾಗೂ ಮೈಸೂರು ವಿಭಾಗದಲ್ಲಿ 85 ನಿಲ್ದಾಣಗಳಲ್ಲಿ ಈ ಸೌಲಭ್ಯ ಕಲ್ಪಿಸಲಾಗಿದೆ. ಪಶ್ಚಿಮ ಘಟ್ಟದ ದೂದ್‌ಸಾಗರ್‌ ನಿಲ್ದಾಣದಲ್ಲೂ ಸೌಲಭ್ಯವಿದೆ ಎಂದು ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅಜಯ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಡಿಜಿಟಲ್‌ ಇಂಡಿಯಾ ಕನಸು ಸಾಕಾರಗೊಳಿಸುವ ಉದ್ದೇಶದಿಂದ ನೈರುತ್ಯ ರೈಲ್ವೆ ಈ ಕಾರ್ಯ ಹಮ್ಮಿಕೊಂಡಿತ್ತು. 2016–18ರ ಅವಧಿಯ ಮೊದಲ ಹಂತದಲ್ಲಿ 153 ನಿಲ್ದಾಣಗಳಿಗೆ ವೈ–ಫೈ ಕಲ್ಪಿಸಲಾಗಿತ್ತು. ಎರಡನೇ ಹಂತದಲ್ಲಿ 125 ನಿಲ್ದಾಣಗಳಲ್ಲಿ ಸೌಲಭ್ಯ ಒದಗಿಸಲಾಗಿದೆ.ಅಗಸ್ಟ್‌ ಅಂತ್ಯದ ವೇಳೆಗೆ ಎಲ್ಲ ನಿಲ್ದಾಣಗಳಲ್ಲಿ ಕೆಲಸ ಪೂರ್ಣಗೊಳಿಸುವಂತೆರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT