ಬೆಂಗಳೂರು: ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಅಧ್ಯಕ್ಷ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಶೇ 52.09 ರಷ್ಟು ಮತದಾನ ನಡೆದಿದೆ.

3.05 ಲಕ್ಷ ಮತದಾರರಲ್ಲಿ 1.59 ಲಕ್ಷ ಮತದಾರರು ಹಕ್ಕು ಚಲಾಯಿಸಿದ್ದಾರೆ. ಕೊಡಗಿನಲ್ಲಿ ಗರಿಷ್ಠ (ಶೇ 71.18) ಹಾಗೂ ಬೆಂಗಳೂರು ನಗರ ಜಿಲ್ಲೆಯಲ್ಲಿ ಕನಿಷ್ಠ(ಶೇ 28.88) ಮತದಾನ ನಡೆದಿದೆ. ಹೆಚ್ಚು ಮತದಾರರು ಇರುವ ಕಡೆ ಕಡಿಮೆ ಪ್ರಮಾಣದಲ್ಲಿ ಮತದಾನವಾಗಿದೆ.

2016ರ ಚುನಾವಣೆಯಲ್ಲಿ ಶೇ 57.90ರಷ್ಟು ಮತದಾನವಾಗಿತ್ತು. ಪರಿಷತ್ತಿನ ಕೇಂದ್ರ ಘಟಕದ ಅಧ್ಯಕ್ಷ ಸ್ಥಾನ ಹಾಗೂ ಗಡಿನಾಡು ಘಟಕಗಳ ಅಧ್ಯಕ್ಷ ಸ್ಥಾನಗಳ ಫಲಿತಾಂಶ ಇದೇ 24ಕ್ಕೆ ಪ್ರಕಟ ಆಗಲಿದೆ.

ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನಕ್ಕೆ ಅವಕಾಶ ನೀಡಲಾಗಿತ್ತು. ರಾಜ್ಯದಾದ್ಯಂತ ಶಾಂತಿಯುತವಾಗಿ ಮತದಾನ ನಡೆದಿದೆ. ಸಂಜೆ ವೇಳೆಗೆ ಜಿಲ್ಲಾ ಕಸಾಪ ಚುನಾವಣಾಧಿಕಾರಿಗಳು ತಮ್ಮ ಮತಗಟ್ಟೆಯ ವಿವರದ ಜೊತೆಗೆ ಇತರೇ ತಾಲ್ಲೂಕು ಮತಗಟ್ಟೆಗಳಲ್ಲಿನ ಮತದಾನದ ವಿವರ ಪಡೆದು, ಪರಿಷತ್ತಿನ ಜಿಲ್ಲಾ ಘಟಕಗಳ ಅಧ್ಯಕ್ಷರ ಫಲಿತಾಂಶ ಘೋಷಿಸಿದರು.

ಈ ಬಾರಿ 420 ಮತಗಟ್ಟೆಗಳಿದ್ದವು. ಬೆಂಗಳೂರಿನಲ್ಲಿ ಇದೇ ಮೊದಲ ಬಾರಿ 28 ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾನ ಪ್ರಕ್ರಿಯೆ ನಡೆಸಲಾಯಿತು. ಇದರಿಂದಾಗಿ ಕೆಲವರಿಗೆ ಮತಗಟ್ಟೆ ಮಾಹಿತಿ ಇಲ್ಲದೇ ಗೊಂದಲವಾಯಿತು. ಒಂದೆಡೆಯಿಂದ ಮತ್ತೊಂದೆಡೆ ತೆರಳಿದರು. ಅಭ್ಯರ್ಥಿಗಳ ಭಾವಚಿತ್ರ ವಿದ್ದ ಬ್ಯಾನರ್‌ಗಳು ಎಲ್ಲೆಂದರಲ್ಲಿ ಕಾಣುತ್ತಿದ್ದವು.

ಕಸಾಪ ಚುನಾವಣೆ ಮತದಾನದ ವಿವರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.