ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಂಗಪಟ್ಟಣ: ಮೇಕೆ ಪಣಕ್ಕಿಟ್ಟು ಬಾಜಿಗೆ ಕರೆದ ಕಾಂಗ್ರೆಸ್‌ ಕಾರ್ಯಕರ್ತರು

Published 12 ಮೇ 2023, 19:32 IST
Last Updated 12 ಮೇ 2023, 19:32 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ): ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲುತ್ತಾರೆಂದು ತಾಲ್ಲೂಕಿನ ದೊಡ್ಡಪಾಳ್ಯದ ಕಾಂಗ್ರೆಸ್‌ ಕಾರ್ಯಕರ್ತರು ಶುಕ್ರವಾರ ಮೇಕೆಗಳನ್ನು ಪಣಕ್ಕಿಟ್ಟು ಎದುರಾಳಿಗಳನ್ನು ಬಾಜಿಗೆ ಕರೆದಿದ್ದಾರೆ.

ಗ್ರಾಮದ ನವೀನ್‌ ಮತ್ತು ಡಿ.ಆರ್‌.ಸೋಮೇಶ್‌ ತಮ್ಮ ಒಂದೊಂದು ಮೇಕೆಗಳನ್ನು ಪಣಕ್ಕಿಡುವುದಾಗಿ ಘೋಷಿಸಿದರು. ಊರಿನ ಗಣೇಶ ದೇವಾಲಯದ ಮುಂದೆ ಮೇಕೆಗಳನ್ನು ನಿಲ್ಲಿಸಿ ಬಾಜಿ ಕಟ್ಟುವವರು ಬನ್ನಿ ಎಂದು ಬಹಿರಂಗವಾಗಿ ಆಹ್ವಾನ ನೀಡಿದರು. ₹ 50 ಸಾವಿರ ಬೆಲೆ ಬಾಳುವ ಎರಡು ಮೇಕೆಗಳನ್ನು ಪಣಕ್ಕೆ ಇಡಲು ಸಿದ್ಧದರಿದ್ದೇವೆ ಎಂದು ಹೇಳಿದರು.

’ಒಂದು ಗಂಟೆಯ ಕಾಲ ಮೇಕೆಗಳನ್ನು ದೇವಾಲಯದ ಮುಂದೆ ನಿಲ್ಲಿಸಿ ಕಾಂಗ್ರೆಸ್‌ ಅಭ್ಯರ್ಥಿಯ ಪರವಾಗಿ ಬಾಜಿಗೆ ಕರೆದಿದ್ದೇವೆ. ಆದರೆ ಜೆಡಿಎಸ್‌ ಅಥವಾ ಬಿಜೆಪಿ ಕಡೆಯಿಂದ ಯಾರೊಬ್ಬರೂ ಬಾಜಿಗೆ ಬಂದಿಲ್ಲ. ಬಾಜಿ ಕಟ್ಟುವವರಿಗೆ ಶನಿವಾರ ಬೆಳಿಗ್ಗೆ 8 ಗಂಟೆವರೆಗೂ ಅವಕಾಶ ಉಂಟು’ ಎಂದು ಕಾಂಗ್ರೆಸ್‌ ಕಾರ್ಯಕರ್ತರಾದ ಶಿವಕುಮಾರ್‌, ಶ್ರೀಕಂಠು, ರೇವಣ್ಣ, ಪ್ರೇಮಕುಮಾರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT