ಬೆಂಗಳೂರು: ‘ನಮ್ಮ ಐದು ವರ್ಷಗಳ ನಮ್ಮ ಸರ್ಕಾರದ ಸಾಧನೆಗಳನ್ನು ರಾಜ್ಯಪಾಲರ ಭಾಷಣದ ಮೂಲಕ ಗುರುತಿಸಿ ಶ್ಲಾಘಿಸಿದ ಮತ್ತು ತಮ್ಮ ಸರ್ಕಾರದ ಸಾಧನೆಯ ಬಗ್ಗೆ ಹೇಳಿಕೊಳ್ಳಲು ಏನೂ ಇಲ್ಲ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡ ಬಿಜೆಪಿ ಸರ್ಕಾರಕ್ಕೆ ಧನ್ಯವಾದ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕಪ್ರತಿಕ್ರಿಯಿಸಿದರು.

‘ನೆರೆ ಹಾವಳಿಯಿಂದ ಸಂಕಷ್ಟಕ್ಕೆ ಸಿಲುಕಿದ ರಾಜ್ಯದ ಹಲವು ಸಮಸ್ಯೆಗಳಿಗೆ ರಾಜ್ಯಪಾಲರು ಸ್ಪಂದಿಸಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಆರು ತಿಂಗಳು ಸರ್ಕಾರವನ್ನು ಭದ್ರಪಡಿಸುವುದರಲ್ಲೇ ಸಮಯ ಕಳೆದುಹೋಗಿದೆ, ಜನರ ಕಷ್ಟಗಳಿಗೆ ಸ್ಪಂದಿಸುವುದಕ್ಕೆ ಇವರಿಗೆ ಸಾಧ್ಯವಾಗಿಲ್ಲ’ ಎಂದು ಅವರು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

‘ಭಾಷಣ ತೀರಾ ಸಪ್ಪೆಯಾಗಿದ್ದು, ಇದರ ಬಗ್ಗೆ ಹೇಳಿಕೊಳ್ಳುವುದಕ್ಕೆ ಏನೂ ಉಳಿದಿಲ್ಲ’ ಎಂದು ಅವರು ಹೇಳಿದರು.

ಕೇಂದ್ರದಿಂದಲೇ ಈ ಸ್ಥಿತಿ: ‘ರಾಜ್ಯಪಾಲರ ಭಾಷಣ ಯಾವುದೇ ಹೊಸ ವಿಷಯ ಒಳಗೊಂಡಿಲ್ಲ. ಜಿಎಸ್‌ಟಿ, ನರೇಗಾ ಸೇರಿದಂತೆ ಕೇಂದ್ರದ ಹಲವು ಯೋಜನೆಗಳ ಹಣ ಬಂದಿಲ್ಲ. ಕೇಂದ್ರದಿಂದಾಗಿಯೇ ರಾಜ್ಯಕ್ಕೆ ಈ ಸ್ಥಿತಿ ಬಂದಿದೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

‘ನನ್ನ ಕಾಲದಲ್ಲಿ ರೈತರ ಸಾಲ ಮನ್ನಾ ಜೊತೆಗೆ ಹೊಸ ಯೋಜನೆಗೂ ಚಾಲನೆ ನೀಡಿದ್ದೆ. ಕಳೆದ 6-7 ತಿಂಗಳುಗಳಲ್ಲಿನ ಈ ಸರ್ಕಾರದ ಸಾಧನೆ ಎಂದರೆ ಅವರ ವೈಫಲ್ಯ ಮುಚ್ಚಿಕೊಳ್ಳುವುದಷ್ಟೇ. ನಾನು ಇಲಾಖಾವಾರು ಹಣ ಕಡಿತ ಮಾಡಿರಲಿಲ್ಲ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಭಾಷಣದ ಉದ್ದಕ್ಕೂ ಸುಳ್ಳು ಹೇಳಿದ್ದಾರೆ. ಕೃಷ್ಣಾ, ಮಹದಾಯಿ ವಿಚಾರದಲ್ಲಿ ಪರಿಹಾರಗಳನ್ನು ಪ್ರಸ್ತಾಪಿಸದೆ ಜನರಿಗೆ ಅನ್ಯಾಯ ಮಾಡಲಾಗಿದೆ
–ಎಸ್.ಆರ್.ಪಾಟೀಲ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ

ಜನಪರ ಕಾರ್ಯಕ್ರಮಗಳಿಗೆ ಅವಕಾಶವನ್ನೇ ನೀಡಿಲ್ಲ. ಅಧಿಕಾರಕ್ಕೆ ಬಂದು ಆರು ತಿಂಗಳಾದರೂ ಇನ್ನೂ ಏನೂ ಮಾಡಿಲ್ಲ ಬಸವರಾಜ
–ಹೊರಟ್ಟಿ ವಿಧಾನ ಪರಿಷತ್ ಜೆಡಿಎಸ್ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.