ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ ₹247 ಕೋಟಿ ವೆಚ್ಚದಲ್ಲಿ ಒಟ್ಟು 650 ಬಿಎಸ್–6 ಬಸ್ಗಳನ್ನು ಖರೀದಿಸಲು ಸಚಿವ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಈ ಪೈಕಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ 500 ಮತ್ತು ವಾಯವ್ಯ ರಸ್ತೆ ಸಾರಿಗೆ ನಿಗಮಕ್ಕೆ 150 ಬಸ್ಗಳು ಎಂದು ಮೂಲಗಳು ತಿಳಿಸಿವೆ.

ಸಂಪುಟದ ಇತರ ನಿರ್ಣಯಗಳು

* ಪೌಷ್ಟಿಕ ಆಹಾರ ಯೋಜನೆಯಡಿ ಎಂಟು ಜಿಲ್ಲೆಗಳ ಪರಿಶಿಷ್ಟ ಪಂಗಡದ 50,046 ಕುಟುಂಬಗಳಿಗೆ ₹ 145.03 ಕೋಟಿಯಲ್ಲಿ (ಪ್ರತಿ ಕಿಟ್ಗೆ ₹ 2,415.38) ಒಂದು ವರ್ಷದವರೆಗೆ ಆಹಾರ ಪದಾರ್ಥ ಖರೀದಿಸಿ ಹಂಚಿಕೆ

* ಕಲಬುರಗಿ ವಿಭಾಗದ ಆರೋಗ್ಯ ಕೇಂದ್ರಗಳಲ್ಲಿ ಪ್ರತಿ ಡಯಾಲಿಸಿಸ್ಗೆ ₹ 1,000ದಿಂದ ₹ 1,300ಕ್ಕೆ ಹೆಚ್ಚಳ

* ಇ– ಆಡಳಿತ ಕೇಂದ್ರವು ಅಭಿವೃದ್ಧಿಪಡಿಸಿರುವ ಕರ್ನಾಟಕ ಆಧುನಿಕ ಹಾಜರಾತಿ ನಿರ್ವಹಣಾ ವ್ಯವಸ್ಥೆಯನ್ನು ಶಾಲಾ ಶಿಕ್ಷಣ ಇಲಾಖೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗೆ ಪೂರ್ಣ ಪ್ರಮಾಣದಲ್ಲಿ ವಿಸ್ತರಣೆ

* ಸಮಗ್ರ ಶಿಕ್ಷಣ ಯೋಜನೆಯಡಿ 3,862 ಪ್ರಾಥಮಿಕ, ಪ್ರೌಢ, ಹಿರಿಯ ಪ್ರೌಢ (ಪದವಿ ಪೂರ್ವ) ಮತ್ತು ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯ (ಕೆಜಿಬಿವಿ) ಶಾಲೆಗಳಿಗೆ ₹ 91.55 ಕೋಟಿಯಲ್ಲಿ ಸ್ಮಾರ್ಟ್ ಕ್ಲಾಸ್ ಕೊಠಡಿ

* ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ‘ಸ್ವದೇಶ್ ದರ್ಶನ್–2.0’ ಯೋಜನೆಯಡಿ ₹ 25 ಕೋಟಿ ವೆಚ್ಚದಲ್ಲಿ ಬೀದರ್ ನಗರ ಸಾಂಸ್ಕೃತಿಕ ಮತ್ತು ಪಾರಂಪರಿಕ ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿ

* ಕೋಲಾರ ಜಿಲ್ಲೆಯ ನಗರದ ಸ್ಥಳೀಯ ಸಂಸ್ಥೆಗಳು ಮತ್ತು ಎಪಿಎಂಸಿ ಹಾಗೂ ಬಿಬಿಎಂಪಿಯಿಂದ ಸಂಗ್ರಹವಾಗುವ ಒಟ್ಟಾರೆ 150 ಟನ್ ಹಸಿ ತ್ಯಾಜ್ಯವನ್ನು ಸಂಸ್ಕರಿಸಲು ಕಂಪ್ರೆಸ್ಡ್ ಬಯೊ ಗ್ಯಾಸ್ (ಸಿಬಿಜಿ) ಘಟಕ ಸ್ಥಾಪಿಸಲು, ಕೋಲಾರದ ನಗರಸಭೆಗೆ ಸೇರಿದ ಅರಾಭಿಕೊತ್ತನೂರು ಗ್ರಾಮದಲ್ಲಿ 9.38 ಎಕರೆ ಜಮೀನು 25 ವರ್ಷಗಳ ಅವಧಿಗೆ ಗೇಲ್ ಸಂಸ್ಥೆಗೆ ವರ್ಗಾವಣೆ

* ಕಲಬುರಗಿ ನಗರದ ಮಹಬೂಬು ಗುಲ್ಶನ್ ಗಾರ್ಡನ್ ಇಂದಿರಾ ಸ್ಮಾರಕ ಭವನದಲ್ಲಿ ಮಹಾತ್ಮ ಗಾಂಧೀಜಿ ಪ್ರತಿಮೆ ಪಕ್ಕದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಕಂಚಿನ ಪ್ರತಿಮೆ ಸ್ಥಾಪನೆ

* ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿಪಡಿಸಿರುವ ಎ.ಬಿ. ವಾಜಪೇಯಿ ವಸತಿ ಬಡಾವಣೆಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲು 26.50 ಕೋಟಿ ವೆಚ್ಚದಲ್ಲಿ ವಿದ್ಯುತ್ ಉಪ ಕೇಂದ್ರ ಸ್ಥಾಪನೆ

* ಚಳ್ಳಕೆರೆ ನಗರಕ್ಕೆ ಒಳಚರಂಡಿ ವ್ಯವಸ್ಥೆಯನ್ನು ಕಲ್ಪಿಸುವ ₹ 198 ಕೋಟಿ ಅಂದಾಜು ಮೊತ್ತದ ಯೋಜನೆಯನ್ನು ಕೆಯುಐಡಿಎಫ್ಸಿಯಿಂದ ಕೆಯುಐಡಬ್ಲ್ಯುಎಸ್ಡಿಬಿಗೆ ವಹಿಸಲು ಒಪ್ಪಿಗೆ

* ಧಾರವಾಡ ಜಿಲ್ಲೆಯ ಹುಬ್ಬಳ್ಳಿ, ಅಣ್ಣಿಗೇರಿ ಮತ್ತು ಕುಂದಗೋಳ ತಾಲ್ಲೂಕಿನ ಗ್ರಾಮಗಳಲ್ಲಿ ಒಟ್ಟು 29 ಕೆರೆಗಳಿಗೆ ನೀರು ತುಂಬಿಸಲು ಬೆಣ್ಣೆಹಳ್ಳದ ಉಪ ಹಳ್ಳವಾದ ದೊಡ್ಡ ಹಳ್ಳದಿಂದ ನೀರು ಎತ್ತಲು ₹ 220.60 ಕೋಟಿ ಮೊತ್ತದ ಯೋಜನೆ

* ಬೆಂಗಳೂರು ಎಚ್ಎಸ್ಆರ್ ಬಡಾವಣೆಯಲ್ಲಿ ನಾಸ್ಕಾಂ ಸಹಯೋಗದಲ್ಲಿ ಕಿಯೋನಿಕ್ಸ್ ಸೌಲಭ್ಯದಲ್ಲಿ ₹ 20 ಕೋಟಿ ವೆಚ್ಚದಲ್ಲಿ ಎಐ ಉತ್ಕೃಷ್ಟತಾ ಕೇಂದ್ರ ಸ್ಥಾಪನೆ

* ಕೊಪ್ಪಳ ಜಿಲ್ಲೆಯ ತಳಕಲ್ನಲ್ಲಿ ಬಹ ಕೌಶಲ್ಯಾಭಿವೃದ್ಧಿ ಕೇಂದ್ರದ ಎರಡನೇ ಹಂತದ ನಿರ್ಮಾಣ ಕಾಮಗಾರಿಯನ್ನು ಕೆಕೆಆರ್ಡಿಬಿ ಅನುದಾನದಲ್ಲಿ ₹ 66.75 ಕೋಟಿ ಮೊತ್ತದಲ್ಲಿ ಕೈಗೊಳ್ಳಲು ಅನುಮೋದನೆ

* ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಜನರಿಗೆ 1,200 ಚದರ ಅಡಿ ವಿಸ್ತೀರ್ಣದ ನಿವೇಶನದಲ್ಲಿ 600 ಚದರ ಅಡಿ ವಿಸ್ತೀರ್ಣದಲ್ಲಿ ಮೂಲಸೌಕರ್ಯ ಒಳಗೊಂಡಂತೆ ಒಟ್ಟು ₹ 100 ಕೋಟಿ ಮೊತ್ತದಲ್ಲಿ ಮನೆ ನಿರ್ಮಾಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.