ಆಡಳಿತಾರೂಢ ಕಾಂಗ್ರೆಸ್ ಪಾಳಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಭಾನುವಾರವೂ ಮುಂದುವರಿದಿದೆ. ‘ಮುಖ್ಯಮಂತ್ರಿ ಬದಲಾಗುತ್ತಾರೆ ಎಂದು ಯಾರು ಹೇಳಿದರು’ ಎಂದು ಪ್ರಶ್ನಿಸುತ್ತಲೇ ಹಲವು ಸಚಿವರು, ಪಕ್ಷ ಅದನ್ನು ತೀರ್ಮಾನಿಸುತ್ತದೆ ಎಂದು ಒತ್ತಿ ಹೇಳುತ್ತಿದ್ದಾರೆ. ಸಚಿವ, ಶಾಸಕರ ಈ ಮಾತುಗಳು ಅಧಿಕಾರ ಬದಲಾವಣೆಯ ಕಿಡಿಗೆ ತಿದಿ ಒತ್ತುತ್ತಲೇ ಇವೆ. ಪಕ್ಷದ ನಾಯಕರ ಸಾಲು–ಸಾಲು ದೆಹಲಿ ಭೇಟಿಗಳೂ ಇದಕ್ಕೆ ತುಪ್ಪ ಸುರಿಯುತ್ತಿವೆ
ನನಗೆ ದೊಡ್ಡ ಹುದ್ದೆ ಸಿಗುವ ವಿಚಾರ ಈಗ ಮುಖ್ಯವಲ್ಲ. ತೇಜಸ್ವಿ ಯಾದವ್ ಬಿಹಾರದ ಮುಖ್ಯಮಂತ್ರಿ ಆಗಬೇಕು. ರಾಹುಲ್ ಗಾಂಧಿ ಪ್ರಧಾನಿ ಆಗಬೇಕು