ಬೆಂಗಳೂರು: ರಾಜ್ಯದಲ್ಲಿ ಬುಧವಾರ ಒಂದೇ ದಿನ 1,272 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 16,514ಕ್ಕೆ ತಲುಪಿದೆ.

ಬೆಂಗಳೂರು ಹಾಗೂ ಬೀದರ್‌ನಲ್ಲಿ ತಲಾ ಇಬ್ಬರು, ದಕ್ಷಿಣ ಕನ್ನಡ, ಬೆಳಗಾವಿ, ಹಾಸನದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.ಇದರಿಂದಾಗಿ ಕೋವಿಡ್‌ಗೆ ಸಾವಿಗೀಡಾದವರ ಸಂಖ್ಯೆ 253ಕ್ಕೆ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ 191 ಸೇರಿದಂತೆ 292 ರೋಗಿಗಳು ವಿವಿಧ ಆಸ್ಪತ್ರೆಗಳ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಬೀದರ್‌ನಲ್ಲಿ 23 ಸೇರಿದಂತೆ 145 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.

ಬುಧವಾರ ಒಂದೇ ದಿನ 16,670 ಮಂದಿಯ ಗಂಟಲ ದ್ರವದ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ. ಈವರೆಗೆ ಒಂದು ದಿನ ಪರೀಕ್ಷಿಸಿದ ಅಧಿಕ ಮಾದರಿಗಳಾಗಿವೆ. ಇದರಿಂದಾಗಿಯೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ಕೂಡ ವರದಿಯಾಗಿವೆ. ಬಹುತೇಕ
ಪ್ರಕರಣಗಳಲ್ಲಿ ಸೋಂಕಿತರ ಸಂಪರ್ಕವೇ ಪತ್ತೆಯಾಗಿಲ್ಲ.

ಬೆಂಗಳೂರಿನಲ್ಲಿ 735, ಬಳ್ಳಾರಿ 85, ದಕ್ಷಿಣ ಕನ್ನಡ 84, ಧಾರವಾಡ 35, ಬೆಂಗಳೂರು ಗ್ರಾಮಾಂತರ 29, ವಿಜಯಪುರ 28, ಹಾಸನ 28, ಉತ್ತರ ಕನ್ನಡ 23, ಉಡುಪಿ 22, ಚಾಮರಾಜನಗರ 21, ಬಾಗಲಕೋಟೆ 20, ತುಮಕೂರು 19, ದಾವಣಗೆರೆ 16, ಚಿಕ್ಕಬಳ್ಳಾಪುರ 15, ಕಲಬುರ್ಗಿ 14, ರಾಮನಗರ 14, ಕೊಪ್ಪಳ 13, ರಾಯಚೂರು 12, ಚಿತ್ರದುರ್ಗ 12, ಯಾದಗಿರಿ 8, ಬೀದರ್ 8, ಕೊಡಗು 7, ಮಂಡ್ಯ 5, ಕೋಲಾರ 5, ಶಿವಮೊಗ್ಗ 3, ಗದಗ 2 ಹಾಗೂ ಚಿಕ್ಕಮಗಳೂರಿನಲ್ಲಿ ಒಂದು ಪ್ರಕರಣ ಹೊಸದಾಗಿ ವರದಿಯಾಗಿದೆ.

ಬೆಂಗಳೂರಿನಲ್ಲಿ ಕೊರೊನಾ ಸೋಂಕಿತ 50 ವರ್ಷದ ಪುರುಷ, 50 ವರ್ಷದ ಮಹಿಳೆ, ಬೀದರ್‌ನಲ್ಲಿ 80 ವರ್ಷದ ವೃದ್ಧ, 63 ವರ್ಷದ ಪುರುಷ ಮೃತಪಟ್ಟಿದ್ದಾರೆ. ದಕ್ಷಿಣ ಕನ್ನಡದಲ್ಲಿ 72 ವರ್ಷದ ವೃದ್ಧ, ಹಾಸನದಲ್ಲಿ 30 ವರ್ಷದ ಪುರುಷ ಹಾಗೂ ಬೆಳಗಾವಿಯಲ್ಲಿ 72 ವರ್ಷದ ವೃದ್ಧ ನಿಧನರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.