ಮೊದಲ ರಾಜ್ಯ ಮಹಾರಾಷ್ಟ್ರ
ಸಾಮಾಜಿಕ ಬಹಿಷ್ಕಾರ ನಿಷೇಧ ಕಾಯ್ದೆ ಜಾರಿಗೆ ತಂದ ಭಾರತದ ಮೊದಲ ರಾಜ್ಯ ಮಹಾರಾಷ್ಟ್ರ. ಬಹಿಷ್ಕಾರದ ಮೂಲಕ ದಲಿತರು ಮತ್ತು ಇತರ ಅಳಿವಿನ ಅಂಚಿನಲ್ಲಿರುವ ಸಮುದಾಯಗಳಿಗೆ ರಕ್ಷಣೆ ನೀಡಲು 2016ರಲ್ಲಿ ಕಾಯ್ದೆ ಜಾರಿಗೆ ತರಲಾಯಿತು. 2017ರ ಜುಲೈನಲ್ಲಿ ರಾಷ್ಟ್ರಪತಿ ಅನುಮೋದನೆ ದೊರೆಯಿತು. ಜಾತಿ, ಸಮುದಾಯ, ಧರ್ಮ, ಆಚರಣೆಗಳು ಅಥವಾ ವೈಯಕ್ತಿಕ ಜೀವನಶೈಲಿಯಂತಹ ಯಾವುದೇ ಆಧಾರದ ಮೇಲೆ ಒಬ್ಬ ವ್ಯಕ್ತಿ ಅಥವಾ ಗುಂಪನ್ನು ಬಹಿಷ್ಕರಿಸುವುದನ್ನು ಈ ಕಾಯ್ದೆ ನಿಷೇಧಿಸಿತ್ತು. ಇಂತಹ ಕೃತ್ಯ ಎಸಗುವ ಅಪರಾಧಿಗಳಿಗೆ ಏಳು ವರ್ಷ ಜೈಲು ಶಿಕ್ಷೆ, ₹5 ಲಕ್ಷ ದಂಡ ವಿಧಿಸಲು ಅವಕಾಶ ನೀಡಿದೆ.