ಬೆಂಗಳೂರು: ‘ಮದುವೆ ಆಗುವುದಾಗಿ ಹೇಳಿ ನಂಬಿಸಿದ್ದ ಯುವಕನೊಬ್ಬ ತಮ್ಮ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿಯಾಗುವಂತೆ ಮಾಡಿದ್ದಾನೆ’ ಎಂದು ಆರೋಪಿಸಿ ಯುವತಿಯೊಬ್ಬರು ನಗರದ ಪೊಲೀಸರಿಗೆ ದೂರು ನೀಡಿದ್ದಾರೆ.

ಅದರನ್ವಯ ಆರೋಪಿ ಶಫಿ ಎಂಬಾತನ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆತ ತಲೆಮರೆಸಿಕೊಂಡಿದ್ದಾನೆ.

‘ಆರೋಪಿಯು 2018ರಲ್ಲಿ ಫೇಸ್‌ಬುಕ್ ಖಾತೆಯಿಂದ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದ. ಅದನ್ನು ಸ್ವೀಕರಿಸಿದ್ದೆ. ನಂತರ ನಾವಿಬ್ಬರು ಸ್ನೇಹಿತರಾಗಿದ್ದೆವು. ಪ್ರೀತಿಸುವುದಾಗಿ ಹೇಳಿದ್ದ ಆರೋಪಿ, ಮದುವೆಯಾಗುವ ಭರವಸೆಯನ್ನೂ ನೀಡಿದ್ದ’ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.

‘ಮನೆಯವರ ಜೊತೆ ಜಗಳ ಮಾಡಿಕೊಂಡು ಆರೋಪಿ ವಾಸವಿದ್ದ ಪೇಯಿಂಗ್ ಗೆಸ್ಟ್ ಕಟ್ಟಡಕ್ಕೆ ಹೋಗಿ 10 ದಿನ ಉಳಿದುಕೊಂಡಿದ್ದೆ. ಅದೇ ವೇಳೆ ಆತ ಒತ್ತಾಯದಿಂದ ನನ್ನ ಮೇಲೆ ಅತ್ಯಾಚಾರ ಎಸಗಿದ್ದ. ಕೆಲ ದಿನಗಳ ನಂತರ ಪೋಷಕರು ನನ್ನನ್ನು ಮನೆಗೆ ವಾಪಸ್ ಕರೆಸಿಕೊಂಡಿದ್ದರು.’

‘ಅದಾಗಿ ಎರಡು ತಿಂಗಳ ನಂತರ ಗರ್ಭಿಣಿ ಆದೆ. ಆ ವಿಷಯ ತಿಳಿಯುತ್ತಿದ್ದಂತೆ ಆರೋಪಿ, ಪೇಯಿಂಗ್ ಗೆಸ್ಟ್ ಖಾಲಿ ಮಾಡಿಕೊಂಡು ಪರಾರಿಯಾಗಿದ್ದಾನೆ. ಆತನ ಮನೆ ಇರುವ ಆಂಧ್ರಪ್ರದೇಶಕ್ಕೆ ಹೋಗಿ ವಿಚಾರಿಸಿದಾಗ, ಆತನ ತಂದೆ–ತಾಯಿ ಬೆದರಿಕೆ ಹಾಕಿ ಕಳುಹಿಸಿದ್ದಾರೆ. ಮೂವರ ವಿರುದ್ಧವೂ ಕ್ರಮ ಕೈಗೊಳ್ಳಿ’ ಎಂದು ಯುವತಿ ಕೋರಿದ್ದಾರೆ.

ಪೊಲೀಸರು, ‘ಈ ಪ್ರಕರಣದಲ್ಲಿ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.