ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವ್‌ ಕೂರ್ಗ್‌: ನೆರೆ ಸಂತ್ರಸ್ತರಿಗೆ ನೀವೂ ನೆರವಾಗಿ

Last Updated 18 ಆಗಸ್ಟ್ 2018, 1:29 IST
ಅಕ್ಷರ ಗಾತ್ರ

ಬೆಂಗಳೂರು:ಜಲಪ್ರವಾಹದಿಂದ ಸಂಕಷ್ಟಕ್ಕೆ ಈಡಾಗಿರುವವರಿಗೆ ನೆರವಾಗಲು ನಗರದಲ್ಲಿ ನಾನಾ ಸಂಸ್ಥೆಗಳು ಮುಂದೆ ಬಂದಿವೆ. ಮಳೆಯಿಂದ ಸಂತ್ರಸ್ತರಾಗಿರುವವರಿಗೆ ಅಗತ್ಯ ಸಾಮಗ್ರಿಗಳಾದಆಹಾರ, ಬಟ್ಟೆ, ಹೊದಿಕೆ, ಟಾರ್ಪಲಿನ್‌, ಟೆಂಟ್‌ಗಳನ್ನು ಸಂಗ್ರಹಿಸುತ್ತಿವೆ.

ಬೆಂಗಳೂರಿನ ಕೊಡವ ಸಮಾಜವೂ ಈ ಕಾರ್ಯದಲ್ಲಿ ತೊಡಗಿಕೊಂಡಿದ್ದು,‘ಉದಾರ ಮನಸ್ಸಿನವರು ಪ್ಯಾಕ್ಡ್‌ ಫುಡ್‌, ಹಾಲು, ನೀರಿನ ಬಾಟಲ್‌, ಡ್ರೈಫ್ರುಟ್ಸ್‌, ಬಟ್ಟೆಗಳನ್ನು ಕೊಡಬಹುದು’ ಎಂದು ಸಮಾಜದ ಕಾರ್ಯದರ್ಶಿ ಸಿ.ಕೆ.ಸುಬ್ಬಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈಗಾಗಲೇ ಒಂದು ಲಾರಿಯಷ್ಟು ಸಾಮಗ್ರಿ ಸಂಗ್ರಹವಾಗಿದೆ. ವಾಹನ ಸಾಗುವಷ್ಟು ಪ್ರವಾಹ ತಗ್ಗಿದ ತಕ್ಷಣ, ಅವುಗಳನ್ನು ಅಗತ್ಯವಿರುವ ಜನರಿಗೆ ತಲುಪಿಸುತ್ತೇವೆ’ ಎಂದು ಮಾಹಿತಿ ನೀಡಿದರು. ಈ ಕಾರ್ಯಕ್ಕೆ ಸಮಾಜದ 50ಕ್ಕೂ ಹೆಚ್ಚು ಸದಸ್ಯರು ಕೈಜೋಡಿಸಿದ್ದಾರೆ.

‘ಅಗ್ಗದ ಬೆಲೆಗೆ ಕುಡಿಯುವ ನೀರಿನ ಬಾಟಲಿಗಳನ್ನು ಕೊಡುವವರಿದ್ದರೆ ತಿಳಿಸಿ’ ಎಂದು ಸಂಧ್ಯಾ ಮೆನನ್‌ ಅವರು ಟ್ವೀಟ್‌ ಮಾಡಿದ್ದಾರೆ.

ವಿನಯ್‌ ಅರವಿಂದ್‌ ಎನ್ನುವವರು ಟ್ವೀಟ್‌ ಮಾಡಿ, ‘ವೈಯನಾಡಿನಲ್ಲಿ 143 ನಿರಾಶ್ರಿತ ಕೇಂದ್ರಗಳಲ್ಲಿರುವ 23ಸಾವಿರಕ್ಕೂ ಹೆಚ್ಚು ಜನರಿಗೆ ನೆರವು ನೀಡಿ’ ಎಂದು ಕೋರಿದ್ದಾರೆ.

‘ಕುಶಾಲನಗರದಲ್ಲಿನ ಮಳೆ ನಿರಾಶ್ರಿತರು ಆಹಾರಕ್ಕಾಗಿ ತಮ್ಮ ಹೋಟೆಲ್‌ಗೆ ಬನ್ನಿ. ನಿಮಗಾಗಿ ಬಿಸಿಯೂಟದ ವ್ಯವಸ್ಥೆ ಮಾಡಿದ್ದೇನೆ’ ಎಂದುಡಾಲ್ಫಿನ್‌ ಹೋಟೆಲ್ಮಾ ಲಿಕ ಜಲೀಲ್ ವಿಡಿಯೊ ಮೂಲಕ ಮನವಿ ಮಾಡಿದ್ದಾರೆ.

ಹೀಗೆ ಸಾಷಕ್ಟು ಜನ ಕೇರಳ ಮತ್ತು ಕೊಡಗಿನಲ್ಲಿ ಮಳೆಯಿಂದ ನಲುಗಿರುವ ಜನರಿಗೆ ನೆರವಾಗಲು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಅಗತ್ಯ ಸಾಮಗ್ರಿಗಳನ್ನು ಸಂಗ್ರಹಿಸುತ್ತಿದ್ದಾರೆ.

ಸಾಮಗ್ರಿಗಳನ್ನು ನೀವೂ ಈ ವಿಳಾಸದಲ್ಲಿ ನೀಡಬಹುದು

ಕೊಡವ ಸಮಾಜ, ನಂ.7, 5ನೇ ಅಡ್ಡರಸ್ತೆ, ವಸಂತ ನಗರ, ಬೆಂಗಳೂರು.ಸಂಪರ್ಕ: 080 2226 0188 , 99014 91005

ರಾಂಪುರ
ಸಂಪರ್ಕ: ಎಮ್.ಜೆ ಪವನ್ – 9483949894
#16/1, ಸಂಕರ್ಷಣ , 2ನೇ ಕ್ರಾಸ್, ಶ್ರೀರಾಂಪುರಮ್, ಬೆಂಗಳೂರು–560021

ಬನಶಂಕರಿ
ಸಂಪರ್ಕ: ಅರ್ಜುನ್ ಬಿ.ಎಸ್– 9886393038
No 57, 2ನೇ ಕ್ರಾಸ್, 5ನೇಮುಖ್ಯ ಆಂಜನೇಯ ನಗರ, ಬಿಎಸ್‌ಕೆ 3ನೇ ಹಂತ, ಬೆಂಗಳೂರು– 560085
ಎಲ್‌ಎಮ್: ಜನತಾ ಬಜಾರ್ ಹತ್ತಿರ ಸಿಗ್ನಲ್ ಒಆರ್‌ಆರ್‌

ರಾಜಾಜಿ ನಗರ
ಸಂಪರ್ಕ: ವಿಹಾನ್ (ಆಶ್ರಯ ಸೇವಾ ಟ್ರಸ್ಟ್) – 90360 29333
135, ಡಾ ರಾಜ್‌ಕುಮಾರ್ ರಸ್ತೆ, 1ನೇ ಬ್ಲಾಕ್, 2ನೇ ಹಂತ, ರಾಜಾಜಿ ನಗರ, ಬೆಂಗಳೂರು, ಕರ್ನಾಟಕ- 560010

ಯಲಹಂಕ
ಸಂಪರ್ಕ: ಗೌತಮ್ ಸುಬ್ಬಯ್ಯ– 8951302570
#18, ಶ್ರೀ ಮಂಜುನಾಥ್ ನಿಲಯ, 2ನೇ ಮುಖ್ಯ ರಸ್ತೆ, 3ನೇ ಕ್ರಾಸ್
ಅನ್ನಪೂರ್ಣ ಶಾಲೆಯ ಎದುರು, ವೆಂಕಟಲ, ಯಲಹಂಕ, ಬೆಂಗಳೂರು – 560064

ವಿದ್ಯಾರಣ್ಯಪುರ ಬೆಳಿಗ್ಗೆ 9ರಿಂದ ರಾತ್ರಿ 10
1. ಕರ್ನಾಟಕ ರಾಜ್ಯ ರಕ್ಷಣಾ ಇಲಾಖೆ
ವಿದ್ಯಾರಣ್ಯಪುರ ಬೆಂಗಳೂರು ಬಿಬಿಎಂಪಿ ಒಳಾಂಗಣ ಕ್ರೀಡಾಂಗಣ, ಸಾಯಿಬಾಬಾ ದೇವಸ್ಥಾನದ ಹತ್ತಿರ

2. ಪ್ರದೀಪ್ ರಾಮಚಂದ್ರ (Pradeep Ramachandra) 9535566799
ಪ್ರಜ್ವಲ ಗೌಡ (Prajwal Gowda) 8095221043
ಜಗದೀಶ್ ರಾಜ್ 7411277462
ಮುರಳಿ. ಆರ್ (Murali R) 8660702427

ಭದ್ರಮ್ಮ ತಾಯಿ ಆಶ್ರಮ
ಲೋಕೇಶೋರ್ ಉದ್ಯಾನವನ, ವೀರಣ್ಣ ಲೇ ಔಟ್, ತಿಂಡ್ಲು

ವೇದಾಮೂರ್ತಿ
ಡಿಎಸ್–004, ಬಿ ಬ್ಲಾಕ್ ಕೆಳಹಂತ, ಡಿಎಸ್ ಮ್ಯಾಕ್ಸ್ ಸ್ಪೆನ್ಸರ್ ಅಪಾರ್ಟ್‌ಮೆಂಟ್, ತಿಂಡ್ಲು, ವಿದ್ಯಾರಣ್ಯಪುರ, ಬೆಂಗಳೂರು– 560097
ಶನಿಮಹಾತ್ಮ ದೇವಾಲಯ, ಜಿಕೆವಿಕೆ ರಸ್ತೆ, 9538211224, 7829211224

ಶಾಂತಿನಗರ ನಿವಾಸಿಗಳು ಕಲ್ಯಾಣ ಸಂಘ ಬಸಪ್ಪ ರಸ್ತೆ, ಶಾಂತಿನಗರ
ಪ್ರಸಾದ್‌, ಸಂಪರ್ಕ: 9243463144, ಶಶಿಕಲಾ: 8095130846

ಜೆಪಿನಗರ
454 ಎಸ್‌ಎಸ್‌ ಸೈಬರ್‌ ಸೆಂಟರ್‌, ಜೆಪಿನಗರ 2ನೇ ಹಂತ
ಸಂಪರ್ಕ: 7019320422

ಕೊಡಗು ಗೌಡ ಸಮಾಜ, ಉಳ್ಳಾಲ
ಜೀತೆಂದ್ರ ಬಸಪ್ಪ -9449380870
ಪ್ರವೀಣ್ ಕೆಂಜನಾ - 9900182363
ಬಿಪಿನ್ ಬೆಳ್ಳಿಯಪ್ಪ -9483362673
ಭಾಗ್ಯಶ್ರೀ : 9892528840

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT