ಬೆಂಗಳೂರು: ಪ್ರಕರಣವೊಂದರಲ್ಲಿ ಆರೋಪಿ ಪರವಾಗಿ ವರದಿ ಸಲ್ಲಿಸಲು ₹4 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದ ಕೆ.ಪಿ.ಅಗ್ರಹಾರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಗೋವಿಂದರಾಜು ಅವರು, ಬಂಧನದ ವೇಳೆ ಕೂಗಾಡಿ–ಎಗರಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಚಾಮರಾಜಪೇಟೆಯ ಸಿಎಆರ್ ಮೈದಾನದಲ್ಲಿ ತಮ್ಮನ್ನು ಲೋಕಾಯುಕ್ತ ಪೊಲೀಸ್ ಸಿಬ್ಬಂದಿ ಬಂಧಿಸಿದಾಗ ಗೋವಿಂದರಾಜು ಅವರು ಸಿನಿಮೀಯ ರೀತಿಯಲ್ಲಿ, ಭಾರಿ ರೋಷಾವೇಷ ತೋರಿದ್ದಾರೆ. ತಮ್ಮನ್ನು ಹಿಡಿದವರಿಂದ ತಪ್ಪಿಸಿಕೊಳ್ಳಲು ಭಾರಿ ಪ್ರಯತ್ನ ನಡೆಸಿದ್ದಾರೆ. ಆದರೆ ಲೋಕಾಯುಕ್ತ ಸಿಬ್ಬಂದಿಯ ಸಂಖ್ಯಾಬಲವೇ ಅಧಿಕವಾಗಿದ್ದ ಕಾರಣ, ಅವರ ಯತ್ನ ವಿಫಲವಾಗಿದೆ.

‘ಸಾಮಾನ್ಯವಾಗಿ ನಾವು ಇಂತಹ ಕಾರ್ಯಾಚರಣೆಗಳಲ್ಲಿ ವಿಡಿಯೊ ಮಾಡಿಕೊಳ್ಳುವುದಿಲ್ಲ. ಆದರೆ, ಆರೋಪಿಯು ವಿಚಿತ್ರವಾಗಿ ವರ್ತಿಸಿದ ಕಾರಣಕ್ಕೆ ವಿಡಿಯೊ ಚಿತ್ರೀಕರಿಸಿದೆವು’ ಎಂದು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಸಿಬ್ಬಂದಿ ಒಬ್ಬರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.