ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗೆಜೆಟೆಡ್‌ ಪ್ರೊಬೇಷನರಿ: ಪೂರ್ವಭಾವಿ ಪರೀಕ್ಷೆ ಇಂದು

Published : 26 ಆಗಸ್ಟ್ 2024, 23:30 IST
Last Updated : 26 ಆಗಸ್ಟ್ 2024, 23:30 IST
ಫಾಲೋ ಮಾಡಿ
Comments

ಬೆಂಗಳೂರು: 2023-24ನೇ ಸಾಲಿನ 40 ಕೆಎಎಸ್‌ ಹುದ್ದೆಗಳೂ ಸೇರಿ ಒಟ್ಟು 384 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಮಂಗಳವಾರ ಪೂರ್ವಭಾವಿ ಪರೀಕ್ಷೆ ನಡೆಸಲಿದೆ.

ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ, 214 ಸರ್ಕಾರಿ, 189 ಅನುದಾನಿತ ಹಾಗೂ 161 ಖಾಸಗಿ ಶಾಲಾ– ಕಾಲೇಜುಗಳು ಸೇರಿ ಒಟ್ಟು 564 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

ಒಟ್ಟು ಹುದ್ದೆಗಳ ಪೈಕಿ, 159 ಗ್ರೂಪ್‌ ‘ಎ’ ವೃಂದದ ಮತ್ತು 225 ಗ್ರೂಪ್‌ ‘ಬಿ’ ವೃಂದದ ಹುದ್ದೆಗಳು. ಈ ಹುದ್ದೆಗಳಿಗೆ 2,10,910 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ನೇಮಕಾತಿಗೆ ಕೆಪಿಎಸ್‌ಸಿ ಫೆ. 26ರಂದು ಅಧಿಸೂಚನೆ ಹೊರಡಿಸಿತ್ತು.

ಪತ್ರಿಕೆ–1 ಪರೀಕ್ಷೆ ಬೆಳಿಗ್ಗೆ 10ರಿಂದ 12 ಗಂಟೆವರೆಗೆ, ಪತ್ರಿಕೆ –2 ಪರೀಕ್ಷೆಯು ಮಧ್ಯಾಹ್ನ 2ರಿಂದ 4ಗಂಟೆವರೆಗೆ ನಡೆಯಲಿದೆ. ಪರೀಕ್ಷೆ ಆರಂಭ ಆಗುವುದಕ್ಕಿಂತ ಎರಡು ಗಂಟೆ ಮುಂಚಿತವಾಗಿ ಅಭ್ಯರ್ಥಿಗಳು ಪರೀಕ್ಷಾ ಉಪ ಕೇಂದ್ರದ ಬಳಿ ಹಾಜರಿರಬೇಕು ಎಂದು ಕೆಪಿಎಸ್‌ಸಿ ತಿಳಿಸಿದೆ.

ಕೆಲಸ ದಿನ (ಮಂಗಳವಾರ) ಪೂರ್ವಭಾವಿ ಪರೀಕ್ಷೆ ನಡೆಯುತ್ತಿರುವುದರಿಂದ ಎಲ್ಲ ಪರೀಕ್ಷಾ ಉಪ ಕೇಂದ್ರಗಳಿಗೆ ಅನ್ವಯವಾಗುವಂತೆ ಒಂದು ದಿನದ ವಿಶೇಷ ಸಾರ್ವತ್ರಿಕ ರಜೆ ಘೋಷಿಸಲಾಗಿದೆ. ಪರೀಕ್ಷೆಗೆ ಹಾಜರಾಗುವ ಸರ್ಕಾರಿ ನೌಕರರಿಗೂ ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡಲಾಗಿದೆ.

ಪಾರದರ್ಶಕ ಪರೀಕ್ಷೆ: ಕಟ್ಟುನಿಟ್ಟಿನ ಕ್ರಮ

ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಕೊಠಡಿಯೊಳಗೆ ಮೊಬೈಲ್‌, ಬ್ಲೂ ಟೂತ್, ಕ್ಯಾಲ್ಕುಲೇಟರ್, ವೈಟ್ ಫ್ಲೂಯಿಡ್, ವೈರ್‌ಲೆಸ್‌ ಸೆಟ್, ಪೇಪರ್, ಪುಸ್ತಕಗಳನ್ನು ತೆಗೆದುಕೊಂಡು ಹೋಗುವಂತಿಲ್ಲ. ತುಂಬು ತೋಳಿನ ಶರ್ಟ್‌, ಯಾವುದೇ ಆಭರಣಗಳು (ಮಂಗಳ ಸೂತ್ರ ಮತ್ತು ಕಾಲುಂಗುರವನ್ನು ಹೊರತುಪಡಿಸಿ), ಪುಲ್‌ವೋವರ್ಸ್‌, ಜಾಕೆಟ್‌, ಸ್ವೆಟರ್‌ ಧರಿಸುವುದನ್ನು ನಿಷೇಧಿಸಲಾಗಿದೆ. ಲೋಹದ ಅಥವಾ ಪಾರದರ್ಶಕವಲ್ಲದ ನೀರಿನ ಬಾಟಲಿ ತೆಗೆದುಕೊಂಡು ಹೋಗುವುದಕ್ಕೂ ‌ನಿರ್ಬಂಧ ವಿಧಿಸಲಾಗಿದೆ. ಕಿವಿ, ಬಾಯಿ ಮುಚ್ಚಿಕೊಳ್ಳುವಂತೆ ಅಥವಾ ಯಾವುದೇ ರೀತಿಯ ಫಿಲ್ಟರ್ ಇರುವ ಫೇಸ್‌ ಮಾಸ್ಕ್‌ ಧರಿಸಿ ಪರೀಕ್ಷಾ ಕೊಠಡಿಗೆ ಪ್ರವೇಶಿಸುವಂತಿಲ್ಲ. ಪರೀಕ್ಷಾ ಕೇಂದ್ರದ ಒಳಗೆ ಪ್ರವೇಶಿಸುವ ಮೊದಲು ಅಭ್ಯರ್ಥಿಗಳನ್ನು ತೀವ್ರ ಪರಿಶೋಧನೆಗೆ ಒಳಪಡಿಸಲಾಗುವುದು ಎಂದು ಕೆಪಿಎಸ್‌ಸಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT