ರಂಗನತಿಟ್ಟು: ದೋಣಿ ವಿಹಾರ ಸ್ಥಗಿತ: (ಶ್ರೀರಂಗಪಟ್ಟಣ)- ಕಾವೇರಿ ನದಿ ನೀರಿನ ಹರಿವು ಹೆಚ್ಚಾಗಿದ್ದು, ಕೆಆರ್‌ಎಸ್ ಜಲಾಶಯದ ತಗ್ಗಿನಲ್ಲಿರುವ ರಂಗನತಿಟ್ಟು ಪಕ್ಷಿಧಾಮದಲ್ಲಿ ದೋಣಿ ವಿಹಾರ ಸ್ಥಗಿತಗೊಳಿಸಲಾಗಿದೆ. ‘ಜಲಾಶಯದಿಂದ ಹೆಚ್ಚು ನೀರನ್ನು ನದಿಗೆ ಬಿಡಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ದೋಣಿ ವಿಹಾರವನ್ನು ಶುಕ್ರವಾರದಿಂದಲೇ ಸ್ಥಗಿತಗೊಳಿಸಲಾಗಿದೆ’ ಎಂದು ಪಕ್ಷಿಧಾಮದ ಆರ್‌ಎಫ್‌ಒ ಕೆ.ಸುರೇಂದ್ರ ತಿಳಿಸಿದರು.