ಬೆಳಗಾವಿ: ತಾಲ್ಲೂಕಿನ ಮಚ್ಚೆಯಲ್ಲಿರುವ ಕೆಎಸ್‌ಆರ್‌ಪಿ 2ನೇ ಪಡೆಯ ಘಟಕಕ್ಕೆ ಬುಧವಾರ ಭೇಟಿ ನೀಡಿದ್ದ ಕೆಎಸ್‌ಆರ್‌ಪಿ ಎಡಿಜಿಪಿ ಅಲೋಕ್‌ಕುಮಾರ್ ಅವರು, ಕೊರೊನಾ ಸಂದರ್ಭದಲ್ಲಿ ಆರೋಗ್ಯ ಕಾಪಾಡಿಕೊಳ್ಳುವ ಕುರಿತು ಸಿಬ್ಬಂದಿಗೆ ಮಾಹಿತಿ–ಮಾರ್ಗದರ್ಶನ ನೀಡಿದರು.

ಸಸಿ ನೆಟ್ಟು ನೀರೆರೆದರು. ನೂತನವಾಗಿ ನಿರ್ಮಿಸಿರುವ ಶೆಟಲ್ ಕೋರ್ಟ್ ಹಾಗೂ ಆದಿತ್ಯ ಹಾಲು ಉತ್ಪನ್ನ ಮಳಿಗೆ ಉದ್ಘಾಟಿಸಿದರು. ಕೆಲ ಕಾಲ ಶಟಲ್ ಆಡಿದರು. ಬಳಿಕ ವಸತಿ ಗೃಹದ ಅಧಿಕಾರಿ, ಸಿಬ್ಬಂದಿ ಹಾಗೂ ಕುಟುಂಬದವರ ಕುಂದುಕೊರತೆ ವಿಚಾರಿಸಿದರು.

ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್, ನಗರ ಪೊಲೀಸ್ ಆಯುಕ್ತ ತ್ಯಾಗರಾಜನ್, ಕಮಾಂಡೆಂಟ್ ಹಂಜಾ ಹುಸೇನ್, ಪೊಲೀಸ್ ತರಬೇತಿ ಶಾಲೆ ಪ್ರಾಂಶುಪಾಲ ರಮೇಶ ಬೋರಗಾವಿ, ಸಹಾಯಕ ಕಮಾಂಡೆಂಟ್‌ಗಳಾದ ಹೇಮಂತ್ ಕುಮಾರ್ ಯು.ಎನ್. ಹಾಗೂ ನಾಗೇಶ ಯಡಾಲ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.