ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಸ್‌ಆರ್‌ಟಿಸಿ ಬಸ್‌ ಅಪಘಾತ: ಮೃತಪಟ್ಟ ಪ್ರಯಾಣಿಕರ ಅವಲಂಬಿತರಿಗೆ ಪರಿಹಾರ ವಿತರಣೆ

Published 19 ಫೆಬ್ರುವರಿ 2024, 16:31 IST
Last Updated 19 ಫೆಬ್ರುವರಿ 2024, 16:31 IST
ಅಕ್ಷರ ಗಾತ್ರ

ಬೆಂಗಳೂರು: ಕೆಎಸ್‌ಆರ್‌ಟಿಸಿ ಬಸ್‌ ಅಪಘಾತದಲ್ಲಿ‌ ಮೃತಪಟ್ಟ ಪ್ರಯಾಣಿಕರ ಅವಲಂಬಿತರಿಗೆ ಮೊದಲ ಬಾರಿಗೆ ₹10 ಲಕ್ಷ ಅಪಘಾತ ಪರಿಹಾರ ಚೆಕ್ ಅನ್ನು ಸೋಮವಾರ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕೆಎಸ್‌ಆರ್‌ಟಿಸಿ ಅಧ್ಯಕ್ಷ ಎಸ್‌.ಆರ್‌. ಶ್ರೀನಿವಾಸ್‌ ವಿತರಿಸಿದರು.

ಪ್ರಯಾಣಿಕರಿಗೆ ಅಪಘಾತ ಪರಿಹಾರ ವಿಮೆ ₹3 ಲಕ್ಷ ಇತ್ತು. ಕಳೆದ ಜ.1ರಿಂದ ಈ ಮೊತ್ತವನ್ನು ₹10 ಲಕ್ಷಕ್ಕೆ ಏರಿಸಲಾಗಿತ್ತು. ಫೆ.4ರಂದು ಹಾಸನ ವಿಭಾಗ ಚನ್ನರಾಯಪಟ್ಟಣ ಘಟಕದ ಬಸ್‌ ಸಕಲೇಶಪುರ ಸಮೀಪದ ಬಾಗೆ ಎಂಬಲ್ಲಿ ಅಪಘಾತಕ್ಕೆ ಈಡಾಗಿತ್ತು. ಪ್ರಯಾಣಿಕ ಜಿ.ಎನ್‌. ಅಮೃತ್‌(34) ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಅವರ ತಂದೆಗೆ ಸೋಮವಾರ ₹ 10 ಲಕ್ಷದ ಚೆಕ್‌ ವಿತರಿಸಲಾಯಿತು.

ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್, ನಿರ್ದೇಶಕಿ (ಸಿಬ್ಬಂದಿ ಮತ್ತು ಜಾಗೃತೆ) ನಂದಿನಿ ದೇವಿ, ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT