ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

KSRTC ‘ಅಶ್ವಮೇಧ’ಕ್ಕೆ ಫೆಬ್ರುವರಿ 5ರಂದು ಚಾಲನೆ

ಹೊಸ‌ವಿನ್ಯಾಸ ಹಾಗೂ‌ ಹೊಸ‌ಬ್ರಾಂಡ್‌ನ ‘ಪಾಯಿಂಟ್ ಟು ಪಾಯಿಂಟ್ ಎಕ್ಸ್‌ಪ್ರೆಸ್‌‘– ‘ಅಶ್ವಮೇಧ’ ಕರ್ನಾಟಕ ಸಾರಿಗೆ ಬಸ್‌ ಸಂಚಾರಕ್ಕೆ ಸಿದ್ಧಗೊಂಡಿದೆ.
Published 2 ಫೆಬ್ರುವರಿ 2024, 15:56 IST
Last Updated 2 ಫೆಬ್ರುವರಿ 2024, 15:56 IST
ಅಕ್ಷರ ಗಾತ್ರ

ಬೆಂಗಳೂರು: ಹೊಸ‌ವಿನ್ಯಾಸ ಹಾಗೂ‌ ಹೊಸ‌ಬ್ರಾಂಡ್‌ನ ‘ಪಾಯಿಂಟ್ ಟು ಪಾಯಿಂಟ್ ಎಕ್ಸ್‌ಪ್ರೆಸ್‌‘– ‘ಅಶ್ವಮೇಧ’ ಕರ್ನಾಟಕ ಸಾರಿಗೆ ಬಸ್‌ ಸಂಚಾರಕ್ಕೆ ಸಿದ್ಧಗೊಂಡಿದೆ. 

3.42 ಮೀಟರ್ ಎತ್ತರ ಇರುವ ಅಶ್ವಮೇಧ (ಕ್ಲಾಸಿಕ್‌) ಬಸ್‌ ಅನ್ನು ‘ಪ್ರಯಾಣದ ಮರು ಕಲ್ಪನೆ’ ಎಂಬ ಘೋಷವಾಕ್ಯದೊಂದಿಗೆ ಪರಿಚಯಿಸಲಾಗುತ್ತಿದೆ. ಈ ಬಸ್‌ನಲ್ಲಿ 52 ಆಸನಗಳಿದ್ದು, ‘ಬಕೆಟ್‌ ಟೈಪ್‌’ ವಿನ್ಯಾಸವನ್ನು ಹೊಂದಿವೆ. ವಾಹನದ ಮುಂದಿನ ಮತ್ತು ಹಿಂದಿನ ಗಾಜು ವಿಶಾಲವಾಗಿವೆ. ಕಿಟಕಿ ಪ್ರೇಮ್ ಹಾಗೂ ಮೇಲಿನ ಗಾಜು ದೊಡ್ಡದಾಗಿದ್ದು, ಟಿಂಟೆಡ್‌ ಗಾಜುಗಳನ್ನು ಹೊಂದಿವೆ. 

ವಾಹನದ ಒಳಾಂಗಣದ ಲಗೇಜ್ ಕ್ಯಾರಿಯರ್ ಅನ್ನು ವಿನೂತನವಾಗಿ ವಿನ್ಯಾಸ ಮಾಡಲಾಗಿದೆ. ಒಳಾಂಗಣದಲ್ಲಿ ನಿರಂತರ ಉರಿಯುವ ಎಲ್‌ಇಡಿ ದೀಪಗಳಿವೆ. ಎಲ್‌ಇಡಿ ಮಾರ್ಗಫಲಕ ಇದೆ. ಸ್ವಯಂಚಾಲಿತ ಬಾಗಿಲುಗಳು ಮತ್ತು ತುರ್ತು ಬಟನ್‌ ವ್ಯವಸ್ಥೆ ಇದೆ. 

ಈ ಬಸ್‌ಗಳು ಎಲ್ಲ ಜಿಲ್ಲಾ ಕೇಂದ್ರಗಳಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸಲಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧ ಪೂರ್ವದ್ವಾರದ ಮುಂಭಾಗ ಫೆ.5ರಂದು 100 ‘ಅಶ್ವಮೇಧ’ ಬಸ್‌ಗಳಿಗೆ ಚಾಲನೆ ನೀಡಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕೆಎಸ್‌ಆರ್‌ಟಿಸಿ ಅಧ್ಯಕ್ಷ ಎಸ್‌.ಆರ್‌. ಶ್ರೀನಿವಾಸ ಭಾಗವಹಿಸಲಿದ್ದಾರೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT