ಬೆಂಗಳೂರು: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಕೊಡಮಾಡುವ 2020ನೇ ಸಾಲಿನ ಗೌರವ ಪ್ರಶಸ್ತಿಗೆ ಅನುವಾದಕರಾದ ಕಾಸರಗೋಡಿನ ಎ. ನರಸಿಂಹ ಭಟ್, ಬೆಂಗಳೂರಿನ ಡಾ.ಎಂ. ಶಿವಕುಮಾರ ಸ್ವಾಮಿ ಸೇರಿದಂತೆ ಐವರು ಭಾಜನರಾಗಿದ್ದಾರೆ.

ಪ್ರಾಧಿಕಾರದ ಸರ್ವಸದಸ್ಯರ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ಗೌರವ ಪ್ರಶಸ್ತಿಯು ತಲಾ ₹ 50 ಸಾವಿರ ನಗದು ಹಾಗೂ ಫಲಕವನ್ನು ಒಳಗೊಂಡಿದೆ. 2019ನೇ ಸಾಲಿನಲ್ಲಿ ಪ್ರಥಮಾವೃತ್ತಿಯಲ್ಲಿ ಅನುವಾದಗೊಂಡಿರುವ ಐದು ಅನುವಾದಿತ ಪುಸ್ತಕಗಳಿಗೆ ‘ಪುಸ್ತಕ ಬಹುಮಾನ’ ಪ್ರಕಟಿಸಲಾಗಿದೆ. ಈ ಬಹುಮಾನವು ತಲಾ ₹ 25 ಸಾವಿರ ನಗದು ಹಾಗೂ ಫಲಕ ಒಳಗೊಂಡಿದೆ.

ಗೌರವ ಪ್ರಶಸ್ತಿ: ಎ. ನರಸಿಂಹ ಭಟ್ (ಕಾಸರಗೋಡು), ಡಾ.ಎಂ. ಶಿವಕುಮಾರ ಸ್ವಾಮಿ (ಬೆಂಗಳೂರು), ಲಕ್ಷ್ಮೀಕಾಂತ ಎಸ್. ಹೆಗಡೆ (ಬೆಂಗಳೂರು), ಡಿ.ಎನ್. ಶ್ರೀನಾಥ್ (ಶಿವಮೊಗ್ಗ) ಹಾಗೂ ಡಾ.ಸಿ. ಶಿವಕುಮಾರಸ್ವಾಮಿ (ಬೆಂಗಳೂರು) ಅವರು ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪುಸ್ತಕ ಬಹುಮಾನ: ‘ಡಬ್ಲ್ಯೂ.ಬಿ.ಯೇಟ್ಸ್ ಕವಿತೆಯ ಎಪ್ಪತ್ತು ಕವನಗಳು’–ಪ್ರೊ.ವಿ. ಕೃಷ್ಣಮೂರ್ತಿ ರಾವ್ (ಇಂಗ್ಲಿಷ್ನಿಂದ ಕನ್ನಡ), ‘ಇಂದಿರಾ ಬಾಯಿ’–ಪ್ರೊ.ವನಮಾಲಾ ವಿಶ್ವನಾಥ್ ಮತ್ತು ಡಾ.ಶಿವರಾಮ ಪಡಿಕ್ಕಲ್ (ಕನ್ನಡದಿಂದ ಇಂಗ್ಲಿಷ್), ‘ನಾನೆಂಬ ಭಾರತೀಯ’–ಬಿ. ನರಸಿಂಗರಾವ್ (ಭಾರತೀಯ ಭಾಷೆಗಳಿಂದ ಕನ್ನಡಕ್ಕೆ), ‘ವಿಮುಕ್ತ’–ಅಜಯ್ ವರ್ಮಾ ಅಲ್ಲೂರಿ (ಭಾರತೀಯ ಭಾಷೆಗಳಿಂದ ಕನ್ನಡಕ್ಕೆ) ಹಾಗೂ ‘ಕುರ್ರೋಡು ತ್ರಿಶುಲಂ ಪಟ್ಟಿನ ಕಥ’–ರಂಗನಾಥ ರಾಮಚಂದ್ರ ರಾವ್ (ಕನ್ನಡದಿಂದ ಬೇರೆ ಭಾರತೀಯ ಭಾಷೆಗಳಿಗೆ) ಅವರು ‘ಪುಸ್ತಕ ಬಹುಮಾನಕ್ಕೆ’ ಆಯ್ಕೆಯಾಗಿದ್ದಾರೆ ಎಂದು ಪ್ರಾಧಿಕಾರದ ರಿಜಿಸ್ಟ್ರಾರ್ ಈಶ್ವರ ಕು. ಮಿರ್ಜಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.