ಚಿಕ್ಕಬಳ್ಳಾಪುರ: ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕೇಂದ್ರ ಸರ್ಕಾರದಲ್ಲಿ ಕೆಲಸ ಮಾಡುವುದು ಕಷ್ಟವಾಗುತ್ತಿದೆ. ಆ ಕಾರಣ ರಾಜ್ಯ ಸರ್ಕಾರವನ್ನು ಬೀಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಆರೋಪಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕುಮಾರಸ್ವಾಮಿ ಅವರಿಗೆ ಸುಲಲಿತವಾಗಿ ಇಂಗ್ಲಿಷ್ ಮಾತನಾಡಲು ಆಗದೇ ಇರಬಹುದು. ಹಿಂದಿ ಅರ್ಥವಾಗದೇ ಇರಬಹುದು. ಭಾಷೆಯ ಸಮಸ್ಯೆ ಕಾರಣ ಕೇಂದ್ರದಲ್ಲಿ ಕೆಲಸ ಮಾಡಲು ಅವರಿಗೆ ಕಷ್ಟವಾಗಿದೆ. ಕೇಂದ್ರದಲ್ಲಿ ಸಮಾಧಾನವಿಲ್ಲದ ಕಾರಣ ಸರ್ಕಾರ ಬೀಳಿಸಲು ನಿರಂತರವಾಗಿ ಒದ್ದಾಡುತ್ತಿದ್ದಾರೆ ಎಂದರು.
ದಾಖಲೆಗಳು ಎಂದು ಪೇಪರ್ ತೋರಿಸುತ್ತಾರೆ. ಆ ಪೇಪರ್‌ನಲ್ಲಿ ಏನಿದೆಯೊ ಗೊತ್ತಿಲ್ಲ. ಕುಮಾರಸ್ವಾಮಿ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ ಎಂದು ಟೀಕಿಸಿದರು.