ಸುವರ್ಣ ವಿಧಾನಸೌಧ (ಬೆಳಗಾವಿ): ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಪ್ರತ್ಯೇಕ ಬಜೆಟ್ ಮಂಡಿಸಬೇಕು, ಕಲ್ಯಾಣ ಕರ್ನಾಟಕದ ಮಾದರಿಯಲ್ಲಿ ಕಿತ್ತೂರು ಕರ್ನಾಟಕಕ್ಕೂ ಪ್ರತ್ಯೇಕ ಅನುದಾನ ಮೀಸಲಿಡಬೇಕು ಎಂದು ಬಿಜೆಪಿಯ ಕೆ.ಎಸ್. ಸುನೀಲ್, ಪಿ.ಎಚ್. ಪೂಜಾರ್, ಕಾಂಗ್ರೆಸ್ನ ಪ್ರಕಾಶ್ ಹುಕ್ಕೇರಿ, ಜೆಡಿಎಸ್ನ ಕೆ.ಎ. ತಿಪ್ಪೇಸ್ವಾಮಿ ಒತ್ತಾಯಿಸಿದರು.

ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಕುರಿತು ವಿಧಾನಪರಿಷತ್ನಲ್ಲಿ ಚರ್ಚಿಸಿದ ಅವರು, ಕೃಷ್ಣ ಮೇಲ್ದಂಡೆ, ಕಳಸಾ–ಬಂಡೂರಿ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು. ಪಕ್ಷಾತೀತವಾಗಿ ಕೇಂದ್ರದ ಮೇಲೆ ಒತ್ತಡ ತರಬೇಕು. ರಾಜ್ಯದ ಹಿತಾಸಕ್ತಿಗೆ ಎಲ್ಲರೂ ಶ್ರಮಿಸಬೇಕು. ಕಿತ್ತೂರು ಕರ್ನಾಟಕ್ಕೆ ₹3,500 ಕೋಟಿ ಪ್ರತ್ಯೇಕ ಅನುದಾನ ನೀಡಬೇಕು ಎಂದರು.

ಬಿಜೆಪಿಯ ಹಣಮಂತ ನಿರಾಣಿ ಮಾತನಾಡಿ, ನೀರಾವರಿ ಸೇರಿದಂತೆ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರ ಇಚ್ಚಾಶಕ್ತಿ ತೋರಬೇಕು. ಮುಳುಗಡೆ ಸಂತ್ರಸ್ತರು, ಭೂಮಿ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ದೊರಕಿಸಬೇಕು. ದಕ್ಷಿಣದ ಜಿಲ್ಲೆಗಳು ಹಾಗೂ ಉತ್ತರ ಭಾಗದಲ್ಲಿ ಸಮಾನ ಅಭಿವೃದ್ಧಿ ಸಾಧ್ಯವಾಗಿದ್ದರೆ ಉತ್ತರ ಕರ್ನಾಟಕದ ಜನರು ಪ್ರತ್ಯೇಕ ರಾಜ್ಯದ ಬೇಡಿಕೆ ಮಂಡಿಸುವ ದಿನಗಳು ದೂರವಿಲ್ಲ ಎಂದು ಹೇಳಿದರು.

‘ಚಿಕ್ಕೋಡಿಯನ್ನು ಹೊಸ ಜಿಲ್ಲೆಯನ್ನಾಗಿ ಘೋಷಿಸಬೇಕು. ಬೆಳಗಾವಿ ಆಸ್ಪತ್ರೆಗೆ ಅಗತ್ಯವಾದ ಸಿಬ್ಬಂದಿ ನೇಮಕ ಮಾಡಬೇಕು. ಅನುದಾನ ನೀಡಬೇಕು. ಬೆಳಗಾವಿಗೆ ಮಂಜೂರಾಗಿರುವ ಕ್ಯಾನ್ಸರ್ ಆಸ್ಪತ್ರೆಯನ್ನು ಚಿಕ್ಕೋಡಿಯಲ್ಲಿ ಆರಂಭಿಸಬೇಕು’ ಎಂದು ಪ್ರಕಾಶ್ ಹುಕ್ಕೇರಿ ಆಗ್ರಹಿಸಿದರು.

ಕಾಂಗ್ರೆಸ್ನ ನಾಗರಾಜ ಯಾದವ್ ಮಾತನಾಡಿ, ‘ಬೆಳಗಾವಿಯಲ್ಲಿ ವಿಧಾನಸೌಧ ಕಟ್ಟಿದ ಮಾತ್ರಕ್ಕೆ ಉತ್ತರ ಕರ್ನಾಟಕ ಅಭಿವೃದ್ಧಿಯಾಗುವುದಿಲ್ಲ. ಆಳುವ ಎಲ್ಲ ಸರ್ಕಾರಗಳು ಸರ್ಕಾರದ ಒಂದಷ್ಟು ಕಚೇರಿಗಳನ್ನು ಇಲ್ಲಿಗೆ ಸ್ಥಳಾಂತರಿಸಬೇಕು ಹಾಗೂ ಪ್ರತಿ ಮೂರು ತಿಂಗಳಿಗೊಮ್ಮೆ ಬೆಳಗಾವಿಯಲ್ಲೇ ಸಚಿವ ಸಂಪುಟ ಸಭೆ ನಡೆಸಬೇಕು’ ಎಂದರು.

ಬಿಜೆಪಿಯ ಪ್ರತಾಪ್ ಸಿಂಹ ನಾಯಕ್, ‘60ರ ದಶಕದಲ್ಲಿ ಆರಂಭವಾದ ಕೃಷ್ಣಾ ಮೇಲ್ದಂಡೆ ಯೋಜನೆ ಇಂದಿಗೂ ಪೂರ್ಣಗೊಳಿಸಲಾಗಿಲ್ಲ ಎಂದರೆ ಏನು ಹೇಳಬೇಕು? ಯೋಜನೆ ಆರಂಭವಾದಾಗ ಕೆಲವೇ ಸಾವಿರ ಕೋಟಿಗಳಲ್ಲಿ ಮುಗಿಯಬೇಕಿದ್ದ ಯೋಜನೆ, ಪೂರ್ಣಗೊಳ್ಳಬೇಕಿದ್ದರೆ ಲಕ್ಷಾಂತರ ಕೋಟಿ ರೂಪಾಯಿ ಅನುದಾನ ಸುರಿಯಬೇಕಾಗಿದೆ. ಗ್ಯಾರಂಟಿಗಳಿಗೆ ಮೀಸಲಿಟ್ಟ ₹ 60 ಸಾವಿರ ಕೋಟಿಯಲ್ಲಿ ₹ 30 ಸಾವಿರ ಕೋಟಿಯನ್ನು ಮುಂದಿನ 5 ವರ್ಷ ಈ ಯೋಜನೆಗೆ ನೀಡಿದರೆ ಪೂರ್ಣಗೊಳಿಸಲು ಸಾಧ್ಯ. ಆ ಮೂಲಕ, ಸಿದ್ದರಾಮಯ್ಯ ಅವರು ಈ ಭಾಗದ ಭಗೀರಥ ಅನಿಸಿಕೊಳ್ಳುತ್ತಿದ್ದರು’ ಎಂದರು.

ಕಾಂಗ್ರೆಸ್ನ ಶ್ರೀನಿವಾಸ್, ‘ರಾಜ್ಯದಲ್ಲಿ ಮತ್ತೊಂದು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಆಲೋಚನೆಯಲ್ಲಿರುವ ರಾಜ್ಯ ಸರ್ಕಾರವು ಅದನ್ನು ಉತ್ತರ ಕರ್ನಾಟಕದ ಭಾಗದಲ್ಲಿ ಮಾಡಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.