ಕಲಬುರ್ಗಿ: ಕಲಬುರ್ಗಿ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿದ್ದ ಜಿಲ್ಲಾ ಬಿಸಿಎಂ ಅಧಿಕಾರಿ ರಮೇಶ ಸಂಗಾ ಅವರಿಗೆ ಶಾಸಕರ ಬೆಂಬಲಿಗರಾದ ಪಾಲಿಕೆ ಸದಸ್ಯ ಪ್ರಭು ಹಾದಿಮನಿ ಹಾಗೂ ಚಂದ್ರಕಾಂತ ಎಂಬುವವರು ಜೀವ ಬೆದರಿಕೆ ಹಾಕಿದ್ದಾರೆ.

ರಾತ್ರಿ ಹಲವು ಬಾರಿ ತಮಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಶ್ವವಿದ್ಯಾಲಯ ಠಾಣೆ ಪೊಲೀಸರಿಗೆ ರಾತ್ರಿ 3 ಗಂಟೆಗೆ ದೂರು ನೀಡಿದ್ದಾರೆ.

ಶಾಸಕ ಪಾಟೀಲ ಬಡವರಿಗಾಗಿ ದಿನಸಿ ಕಿಟ್ ನೀಡುತ್ತಿದ್ದು, ಅದಕ್ಕಾಗಿ ನೆರವು ನೀಡುವಂತೆ ತಮ್ಮ ಆಪ್ತಸಹಾಯಕ ಪ್ರವೀಣ ಮೂಲಕ ಸಂಗಾ ಅವರಿಗೆ ಕರೆ ಮಾಡಿಸಿದ್ದರು. ಆದರೆ ಸಂಗಾ ಹಣ ನೀಡಿರಲಿಲ್ಲ. ಇದರಿಂದ ಅಸಮಾಧಾನಗೊಂಡ ಶಾಸಕರು ಹಲವು ಬಾರಿ ತಮಗೆ ಏಕವಚನದಲ್ಲಿ ನಿಂದಿಸಿದ್ದಾರೆ ಎಂದು ಸಂಗಾ ಗುರುವಾರ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.

ಪಾಟೀಲ ಬೆಂಬಲಗರು ತಮಗೆ ಧಮಕಿ ಹಾಕಿದ ಫೋನ್ ರೆಕಾರ್ಡಿಂಗ್‌ನೊಂದಿಗೆ ಸಂಗಾ ದೂರು ನೀಡಿದ್ದು, ಇನ್ನೂ ಎಫ್ಐಆರ್ ದಾಖಲಾಗಿಲ್ಲ.

ಸಂಗಾಗೆ ಶೋಕಾಸ್ ನೋಟಿಸ್: ಶಾಸಕರು ಲಂಚ ಕೇಳಿದ ಹಾಗೂ ವೈಯಕ್ತಿಕವಾಗಿ ನಿಂದಿಸಿದ್ದರೆ ಅದನ್ನು ಮೇಲಧಿಕಾರಿಗಳ ಗಮನಕ್ಕೆ ತರುವ ಬದಲು ಮಾಧ್ಯಮಗಳಿಗೆ ಹೇಳಿಕೆ ನೀಡುವ ಮೂಲಕ ಶಿಸ್ತು ಉಲ್ಲಂಘಿಸಿದ್ದಕ್ಕಾಗಿ ಜಿಲ್ಲಾಧಿಕಾರಿ ಶರತ್ ಬಿ. ಅವರು ರಮೇಶ ಸಂಗಾ ಅವರಿಗೆ ಗುರುವಾರ ತಡರಾತ್ರಿ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದಾರೆ.

ಇದನ್ನೂ ಓದಿ...ಲಂಚಕ್ಕೆ ಶಾಸಕನ ಬೇಡಿಕೆ: ಆರೋಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.