ಬೆಂಗಳೂರು: ‘ಬೆಳಕು ಯೋಜನೆ ಅಡಿ ವಿದ್ಯುತ್ ಸಂಪರ್ಕ ಕಲ್ಪಿಸಲು ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಪಂಚಾಯ್ತಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ(ಬಿಬಿಎಂಪಿ) ಅನುಮತಿ ಕಡ್ಡಾಯವಲ್ಲ (ನಿರಾಕ್ಷೇಪಣಾ ಪತ್ರ) ಎನ್ನುವ ಆದೇಶ ಹೊರಡಿಸಲಾಗಿದೆ’ ಎಂದು ಇಂಧನ ಸಚಿವ ವಿ. ಸುನೀಲ್ ಕುಮಾರ್ ಹೇಳಿದರು.

ಕರ್ನಾಟಕರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘವು ನಗರದಲ್ಲಿ ಭಾನುವಾರ ಆಯೋಜಿಸಿದ್ದ ವಿದ್ಯುತ್ ಗುತ್ತಿಗೆದಾರರ ಸಮಾವೇಶ ಹಾಗೂ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

’ವಿದ್ಯುತ್ ಸಂಪರ್ಕ ಪಡೆಯಲು ನಾಲ್ಕೂವರೆ ವರ್ಷಗಳ ವಾಸಸ್ಥಳ ದೃಢೀಕರಣ ಪತ್ರ ನೀಡಬೇಕೆಂದು ಹಿಂದಿನ ಸರ್ಕಾರವು ಆದೇಶಿಸಿತ್ತು. ನಮ್ಮ ಸರ್ಕಾರವು ವಾಸ ದೃಢೀಕರಣ ಪತ್ರ ರದ್ದು ಪಡಿಸಿದೆ. ಇದರಿಂದ, ಗ್ರಾಹಕರಿಗೆ ಅನುಕೂಲವಾಗಿದೆ. ವಿದ್ಯುತ್ ಪರಿವರ್ತಕಗಳನ್ನು ನಾಲ್ಕು ಗಂಟೆಯಲ್ಲೇ ಬದಲಾವಣೆ ಮಾಡಲು ಕಾರ್ಯಾದೇಶ ನೀಡಲಾಗಿದೆ. ಹೆಸ್ಕಾಂ, ಬೆಸ್ಕಾಂ, ಸೆಸ್ಕ್‌ನಲ್ಲಿ ಏಕದರ ನಿಗದಿ ಪಡಿಸಲಾಗುವುದು’ ಎಂದು ವಿವರಣೆ ನೀಡಿದರು.

ಗುತ್ತಿಗೆದಾರರ ಸಂಘದ ರಾಜ್ಯ ಅಧ್ಯಕ್ಷ ಸಿ.ರಮೇಶ್ ಅವರು ಮಾತನಾಡಿ, ’ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘಕ್ಕೆ 100 ವರ್ಷಗಳ ಇತಿಹಾಸವಿದೆ. ವಿದ್ಯುತ್ ಗುತ್ತಿಗೆದಾರರ ಸಂಕಷ್ಟ ಹಾಗೂ ಸಮಸ್ಯೆಗಳ ಪರಿಹರಿಸಲು ಸಂಘವು ಸತತವಾಗಿ ಶ್ರಮಿಸುತ್ತಿದೆ’ ಎಂದು ಹೇಳಿದರು.

’ರಾಜ್ಯದಲ್ಲಿ 30 ಸಾವಿರ ವಿದ್ಯುತ್ ಗುತ್ತಿಗೆದಾರರು ಇದ್ದಾರೆ. ಇವರನ್ನೇ ನಂಬಿ 10 ಲಕ್ಷ ಜನರು ಕೆಲಸ ಮಾಡುತ್ತಿದ್ದಾರೆ. ₹ 1 ಲಕ್ಷದಿಂದ ₹ 5 ಲಕ್ಷದ ತನಕ ತುಂಡು ಗುತ್ತಿಗೆ ನೀಡಬೇಕು. ಪ್ಯಾಕೇಜ್ ಮಾಡುವುದರಿಂದ ಸಣ್ಣಪುಟ್ಟ ಗುತ್ತಿಗೆದಾರರಿಗೆ ತೊಂದರೆ ಆಗಲಿದೆ’ ಎಂದು ಅವರು ಈ ವೇಳೆ ಮಾಹಿತಿ ನೀಡಿದರು.

ಸಂಘದ ವೆಬ್‌ಸೈಟ್ ಮತ್ತು ಲಾಂಛನ ಬಿಡುಗಡೆ ಮಾಡಲಾಯಿತು.

ಇದೇ ವೇಳೆ ಗುತ್ತಿಗೆದಾರರ ಸಂಘವು ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಸಚಿವರಿಗೆ ಮನವಿ ಸಲ್ಲಿಸಿತು. ಉಪಾಧ್ಯಕ್ಷರಾದ ಎಂ.ಎನ್.ಉಮೇಶ್, ಊರ್ಬನ್ ಪಿಂಟೊ, ಪ್ರಧಾನ ಕಾರ್ಯದರ್ಶಿ ಎಚ್.ವಿ.ಚಂದ್ರಬಾಬು, ಸಹ ಕಾರ್ಯದರ್ಶಿ ಅನ್ವರ್ ಮಿಯಾ, ಸಂಘಟನಾ ಕಾರ್ಯದರ್ಶಿ ಶಿವಾನಂದ ಬಿ. ಬಾಲಪ್ಪನವರ್, ಕೋಶಾಧ್ಯಕ್ಷ ಕ.ಚಂದ್ರಬಾಬು ಅವರುಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.