ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಪ್ರಧಾನಿ‌ ಮೋದಿ ಆಗಮನಕ್ಕೆ ಕ್ಷಣಗಣನೆ

Published 16 ಮಾರ್ಚ್ 2024, 7:43 IST
Last Updated 16 ಮಾರ್ಚ್ 2024, 7:43 IST
ಅಕ್ಷರ ಗಾತ್ರ

ಕಲಬುರಗಿ: ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಮೊದಲ ‌ಪ್ರಚಾರ ಸಭೆಯಲ್ಲಿ ಭಾಗವಹಿಸಲಿರುವ ಪ್ರಧಾನಿ ‌ನರೇಂದ್ರ‌ ಮೋದಿ ಅವರ ಆಗಮನಕ್ಕೆ ಕ್ಷಣಗಣನೆ ಶುರುವಾಗಿದೆ.

ಕೆಲವೇ ಕ್ಷಣಗಳಲ್ಲಿ ಹೈದರಾಬಾದ್ ನಿಂದ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿರುವ ಪ್ರಧಾನಿ ಅವರು ವಿಮಾನ ನಿಲ್ದಾಣದಿಂದ 12 ಕಿ.ಮೀ. ದೂರ ಇರುವ ಪೊಲೀಸ್ ಪರೇಡ್ ಮೈದಾನಕ್ಕೆ ಹೆಲಿಕಾಪ್ಟರ್ ಮೂಲಕ ಬರಲಿದ್ದಾರೆ.

ಅಲ್ಲಿಂದ ರೋಡ್ ಶೋ ಮೂಲಕ ಸಮಾವೇಶ ನಡೆಯಲಿರುವ ಎನ್.ವಿ. ಮೈದಾನಕ್ಕೆ ಬರಲಿದ್ದಾರೆ. ಸರಿಯಾಗಿ 2ಕ್ಕೆ ವೇದಿಕೆಗೆ ಬರುವ ನಿರೀಕ್ಷೆ ಇದ್ದು, ಬಹಿರಂಗ ‌ಭಾಷಣ ಮಾಡಲಿದ್ದಾರೆ.

ಕಲಬುರಗಿಯ ಜಿಲ್ಲೆಯ ವಿವಿಧ ತಾಲ್ಲೂಕುಗಳು ‌ಹಾಗೂ ಬೀದರ್, ಯಾದಗಿರಿ ಜಿಲ್ಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಎನ್.ವಿ.‌ಮೈದಾನದತ್ತ ಮುಖ ಮಾಡಿದ್ದಾರೆ.

ಸಂಸದ ಡಾ. ಉಮೇಶ್ ಜಾಧವ್, ಪಕ್ಷದ ರಾಜ್ಯ ವಕ್ತಾರ ರಾಜಕುಮಾರ್ ‌ಪಾಟೀಲ ತೇಲ್ಕೂರ, ಪಕ್ಷದ ವಿಭಾಗೀಯ ಪ್ರಭಾರಿ ಈಶ್ವರ ಸಿಂಗ್ ಠಾಕೂರ್, ಮೇಯರ್ ವಿಶಾಲ ದರ್ಗಿ, ಕಲಬುರಗಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಶಿವರಾಜ‌ ಪಾಟೀಲ ರದ್ದೇವಾಡಗಿ, ಮುಖಂಡರಾದ ಶೋಭಾ ಬಾಣಿ, ಶಶಿಕಲಾ ಟೆಂಗಳಿ ವೇದಿಕೆಗೆ ಬಂದಿದ್ದಾರೆ.

ಬಿಗಿ ಬಂದೋಬಸ್ತ್: ನಗರಕ್ಕೆ ಪ್ರಧಾನಿ ಭೇಟಿಯ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಸಮಗ್ರ ತಪಾಸಣೆಯ ‌ಬಳಿಕವೇ ಮೈದಾನದ ಒಳಗಡೆ ಬಿಡಲಾಗುತ್ತಿದೆ. ಬ್ಲೂಟೂತ್, ನೀರಿನ ಬಾಟಲಿ, ಪೆನ್ ನಂತಹ ವಸ್ತುಗಳನ್ನೂ ಒಳಗೆ ಕೊಂಡೊಯ್ಯಲು ಅವಕಾಶ ನೀಡಿಲ್ಲ.

ಕಲಬುರಗಿಯಿಂದ ಮೋದಿ ಪ್ರಚಾರ ಲೈವ್:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT