ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls: ಆದಿಚುಂಚನಗಿರಿ ಶ್ರೀ ಭೇಟಿಯಾದ ‘ಕೈ’ ಕಲಿಗಳು

Published 4 ಏಪ್ರಿಲ್ 2024, 18:25 IST
Last Updated 4 ಏಪ್ರಿಲ್ 2024, 18:25 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿರುವ ಲೋಕಸಭಾ ಕ್ಷೇತ್ರಗಳ ಕಾಂಗ್ರೆಸ್‌ ಹುರಿಯಾಳುಗಳು ಪಕ್ಷದ ನಾಯಕರ ಜೊತೆ ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಗುರುವಾರ ಸಂಜೆ ಭೇಟಿ ಮಾಡಿ ಆಶೀರ್ವಾದ ಪಡೆದರು.

ಮಹಾಲಕ್ಷ್ಮೀ ಲೇ ಔಟ್‌ನ ಬಿಜಿಎಸ್‌ ವರ್ಲ್ಡ್‌ ಸ್ಕೂಲ್‌ನಲ್ಲಿ ಭೇಟಿ ಮಾಡಿ ಸ್ವಾಮೀಜಿಗೆ ಫಲಪುಷ್ಪ ನೀಡಿ ಗೌರವಿಸಿದ ಕಾಂಗ್ರೆಸ್‌ ನಾಯಕರು, ಶುಭ ಹಾರೈಕೆ ಪಡೆದುಕೊಂಡರು.

ಆರಂಭದಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್‌, ಕೃಷಿ ಸಚಿವ ಚಲುವರಾಯ ಸ್ವಾಮಿ ಜೊತೆ ಅಭ್ಯರ್ಥಿಗಳಾದ ರಕ್ಷಾ ರಾಮಯ್ಯ, ಮನ್ಸೂರ್‌ ಅಲಿ ಖಾನ್‌, ಸೌಮ್ಯಾ ರೆಡ್ಡಿ, ಎಂ.ವಿ. ರಾಜೀವ್‌ ಗೌಡ, ಎಂ. ಲಕ್ಷ್ಮಣ್‌, ಎಸ್‌.ಪಿ. ಮುದ್ದ ಹನುಮೇಗೌಡ ಮತ್ತಿತರರು‌ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಕೋರಿದರು.

ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಲಾರ ಕ್ಷೇತ್ರದ ಅಭ್ಯರ್ಥಿ ಕೆ.ವಿ. ಗೌತಮ್‌, ವಿಜಯನಗರ ಶಾಸಕ ಎಂ. ಕೃಷ್ಣಪ್ಪ, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜ್ ಜೊತೆ ಸ್ವಾಮೀಜಿ ಅವರನ್ನು ಭೇಟಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT