ಬೆಂಗಳೂರು: ಫೋಟೊಶೂಟ್ ಮಾಡುವುದಾಗಿ ಹೇಳಿ ಯುವತಿಯೊಬ್ಬರನ್ನು ಸ್ಟುಡಿಯೊಗೆ ಕರೆಸಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಎಸ್.ಎಂ. ಶರತ್‌ಕುಮಾರ್ ಎಂಬಾತನನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

‘ಬಂಧಿತ ಶರತ್‌ಕುಮಾರ್, ಶಂಕರನಗರ ಮುಖ್ಯರಸ್ತೆಯಲ್ಲಿ ಸ್ಟುಡಿಯೊ ಇಟ್ಟುಕೊಂಡಿದ್ದ. ಅದೇ ಸ್ಟುಡಿಯೊಗೆ ಯುವತಿಯನ್ನು ಕರೆಸಿ ಕೃತ್ಯ ಎಸಗಿದ್ದಾನೆ. ಯುವತಿ ನೀಡಿದ್ದ ದೂರಿನನ್ವಯ ಆತನನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಮಾಡೆಲ್ ಆಗಿರುವ ಬೇಗೂರಿನ ಯುವತಿ, ಇನ್‌ಸ್ಟ್ರಾಗ್ರಾಂನಲ್ಲಿ ತಮ್ಮ ಫೋಟೊಗಳನ್ನು ಅಪ್‌ಲೋಡ್ ಮಾಡಿದ್ದರು. ಅವುಗಳನ್ನು ಲೈಕ್ ಮಾಡಿದ್ದ ಆರೋಪಿ ಶರತ್‌ಕುಮಾರ್, ‘ನಾನು ಫೋಟೊಗ್ರಾಫರ್. ನಿಮ್ಮದೊಂದು ಫೋಟೊಶೂಟ್ ಮಾಡಲು ಅವಕಾಶ ಕೊಡಿ’ ಎಂದು ಸಂದೇಶ ಕಳುಹಿಸಿದ್ದ.’

‘ಅದಕ್ಕೆ ಒಪ್ಪಿದ್ದ ಯುವತಿ, ಬುಧವಾರ ಮಧ್ಯಾಹ್ನ ಆರೋಪಿಯ ಸ್ಟುಡಿಯೊಗೆ ಬಂದಿದ್ದರು. ಸ್ಥಳದಲ್ಲಿದ್ದ ಗ್ರಾಹಕರನ್ನೆಲ್ಲ ಹೊರಗೆ ಕಳುಹಿಸಿದ್ದ ಆರೋಪಿ, ಸ್ಟುಡಿಯೊದ ಬಾಗಿಲು ಬಂದ್ ಮಾಡಿ ಫೋಟೊಶೂಟ್ ಆರಂಭಿಸಿದ್ದ. ಅದೇ ವೇಳೆಯೇ ಯುವತಿಯ ಪ್ಯಾಂಟಿನ ಜಿಪ್ ತೆಗೆದು ಅಸಭ್ಯವಾಗಿ ವರ್ತಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಗಾಬರಿಗೊಂಡ ಯುವತಿ ಸ್ಟುಡಿಯೊದಿಂದ ಹೊರಬಂದಿದ್ದರು’ ಎಂದು ಪೊಲೀಸರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.