ಹಳೇಬೀಡು: ಜ್ಯೋತಿರ್ಲಿಂಗ ದರ್ಶನ ಮಾಡುವುದರಿಂದ ಶಿವಜ್ಯೋತಿಯಂತೆ ಬದುಕು ಹೊಸಬೆಳಕಿನತ್ತ ಸಾಗುತ್ತದೆ. ಜ್ಯೋತಿರ್ಲಿಂಗ ದರ್ಶನದಿಂದ ಮನಸ್ಸು ಪರಿಶುದ್ಧವಾಗುತ್ತದೆ ಎಂಬುದು ಭಕ್ತರ ನಂಬಿಕೆ.

Photo Gallery:Photos| ಜ್ಯೋತಿರ್ಲಿಂಗ ನೋಡಲು ದೇಶ ಸುತ್ತಬೇಕಿಲ್ಲ: ಹಳೇಬೀಡಿನ ಪುಷ್ಪಗಿರಿ ಮಠದಲ್ಲೇ ಸಿಗುತ್ತದೆ ದರ್ಶನ ಭಾಗ್ಯ

ಭಕ್ತರು ದೇಶದ ಬೇರೆ ರಾಜ್ಯಗಳಲ್ಲಿರುವ ದ್ವಾದಶ (12) ಜ್ಯೋತಿರ್ಲಿಂಗಗಳನ್ನು ಒಂದೇ ಸ್ಥಳದಲ್ಲಿ ದರ್ಶನ ಮಾಡಲು ಪುಷ್ಪಗಿರಿ ಮಹಾಸಂಸ್ಥಾನ ಮಠದಲ್ಲಿ 3 ತಿಂಗಳ ಹಿಂದೆ ಜ್ಯೋತಿರ್ಲಿಂಗ ಪ್ರತಿಷ್ಠಾಪನೆ ಮಾಡಲಾಗಿದೆ. ಶಿವಭಕ್ತರು ಶಿವರಾತ್ರಿಯ ದಿನ 108 ಶಿವಲಿಂಗದೊಂದಿಗೆ ‘ಜ್ಯೋತಿರ್ಲಿಂಗ’ ದರ್ಶನ ಮಾಡುವ ಭಾಗ್ಯ ಪುಷ್ಪಗಿರಿ ಸಂಸ್ಥಾನ ಮಠ ಕಲ್ಪಿಸಿದೆ.

ಗುರು ಕರಿಬಸವೇಶ್ವರ ಅಜ್ಜಯ್ಯ ಮಂದಿರದ ಮುಂಭಾಗ ಎರಡು ಬದಿಯಲ್ಲಿ 12 ಪ್ರತ್ಯೇಕ ಮಂಟಪಗಳಲ್ಲಿ ಜ್ಯೋತಿರ್ಲಿಂಗಗಳನ್ನು ಪ್ರತಿಷ್ಠಾಪಿಸಲಾಗಿದೆ. ಕಾಶಿ ವಿಶ್ವನಾಥ, ಉಜ್ಜಯಿನಿಯ ಮಹಾಕಾಳೇಶ್ವರ. ಪವಿತ್ರ ನರ್ಮದ ನದಿ ತೀರದ ಓಂಕಾರೇಶ್ವರ, ಹಿಮಾಲಯ ಶ್ರೇಣಿಯ ಕೇದಾರನಾಥ, ಮಹಾರಾಷ್ಟ್ರದ ಭೀಮಾಶಂಕರ, ತ್ರಯಂಬಕೇಶ್ವರ, ಜಾರ್ಖಂಡ್‌ನ ವೈಧ್ಯನಾಥ, ಉತ್ತರಾಖಂಡನಲ್ಲಿರುವ ನಾಗೇಶ್ವರ, ತಮಿಳುನಾಡಿನ ರಾಮೇಶ್ವರ, ರಾಜಸ್ಥಾನದ ಗ್ರೀಶ್ನೇಶ್ವರ, ಶ್ರೀಶೈಲ ಮಲ್ಲಿಕಾರ್ಜುನ ಹಾಗೂ ಗುಜಾರಾತಿನ ಸೋಮನಾಥೇಶ್ವರ ದರ್ಶನಕ್ಕೆ ಪುಷ್ಪಗಿರಿ ಮಠ ಅವಕಾಶ ಕಲ್ಪಿಸಿದೆ. ಜ್ಯೋತಿಲರಿಂಗಗಳ ಮೂಲ ಸ್ಥಳದಿಂದಲೇ ಪೂಜೆ ಮಾಡಿಸಿ ಲಿಂಗುವನ್ನು ತಂದು ಪ್ರತಿಷ್ಠಾಪನೆ ಮಾಡಲಾಗಿದೆ. ಪುಷ್ಪಗಿರಿಯ ಜ್ಯೋತಿರ್ಲಿಂಗ ದರ್ಶನ ಮಾಡುವುದರಿಂದ 12 ಪುಣ್ಯಕ್ಷೇತ್ರ ದರ್ಶನ ಮಾಡಿದ ಪುಣ್ಯ ಪ್ರಾಪ್ತಿಯಾಗುತ್ತದೆ ಎನ್ನುತ್ತಾರೆ ಪುಷ್ಪಗಿರಿ ಮಠದ ಪೀಠಾಧ್ಯಕ್ಷ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ.

ಮಲ್ಲಿಕಾರ್ಜುನ ಲಿಂಗುವಿಗೆ ಗಂಧದ ಅಭಿಷೇಕ ಮಾಡಿದರೆ ಧನಸಂಪತ್ತು ಪ್ರಾಪ್ತಿಯಾಗುತ್ತದೆ. ಭೈದ್ಯನಾಥ ಲಿಂಗುವಿಗೆ ತುಪ್ಪದ ಅಭಿಷೇಕ ಮಾಡಿಸಿದರೆ ಸಂತಾನ ಪ್ರಾಪ್ತಿಯಾಗುತ್ತದೆ. ನಾಗೇಶ್ವರನಿಗೆ ಸುಗಂಧ ತೈಲ ಅಭಿಷೇಕ ಮಾಡಿಸಿದರೆ ಅಪಮೃತ್ಯು ನಿವಾರಣೆಯಾಗುತ್ತದೆ. ಕೇದಾರನಾಥನಿಗೆ ಪಂಚಾಮೃತ ಅಭಿಷೇಕ ಮಾಡಿಸಿದರೆ ವ್ಯವಹಾರ ಲಾಭವಾಗುತ್ತದೆ. ಮಹಾಕಾಳೇಶ್ವರನಿಗೆ ಕುಂಕುಮಾಭಿಷೇಕ ಮಾಡಿಸಿದರೆ ಜಯ ಲಭಿಸುತ್ತದೆ. ಭೀಮಾಶಂಕರನಿಗೆ ಭಸ್ಮಾಭಿಷೇಕ ಮಾಡಿಸಿದರೆ ರೋಗ ನಿವಾರಣೆಯಾಗುತ್ತದೆ. ವಿಶ್ವನಾಥನಿಗೆ ಸಂಜೆ ಅಭಿಷೇಕ ಮಾಡಿಸಿದರೆ ಭಾಗ್ಯೋದಯವಾಗುತ್ತದೆ. ಫಲಸಂಪತ್ತು ನಿವಾರಣೆಯಾಗಲು ಗ್ರೀಶ್ನೇಶ್ವರನಿಗೆ ಎಳ ನೀರಿನ ಅಭಿಷೇಕ ಮಾಡಿಸಬೇಕು ಎಂಬುದು ಭಕ್ತರ ನಂಬಿಕೆಯಾಗಿದೆ.

ಪುಷ್ಪಗಿರಿ ಮಠ ಭಕ್ತರ ನಂಬಿಕೆಯಂತೆ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿದೆ.

ನಿಸರ್ಗ ತಾಣವಾದ ಪುಷ್ಪಗಿರಿ ಬೆಟ್ಟ ಏರಿದಾಕ್ಷಣ ವಿವಿಧ ಪುಣ್ಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಅನುಭವವಾಗುತ್ತದೆ. ಶಿವ ಭಕ್ತರಿಗೆ ಪುಷ್ಪಗಿರಿ ಪ್ರಶಸ್ತ ಸ್ಥಳವಾಗಿದೆ

- ಪ್ರದೀಪ್ ಕೃಷ್ಣೇಗೌಡ, ರೈತ ಹಳೇಬೀಡು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.