ಹುಣಸೂರು: ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ದೇಶದಾದ್ಯಂತ ಲಾಕ್‌ಡೌನ್ ಘೋಷಿಸಿರುವುದರಿಂದ ಬಹುತೇಕ ಎಲ್ಲ ಉದ್ದಿಮೆಗಳು ಆರ್ಥಿಕ ಹಿನ್ನಡೆ ಅನುಭವಿಸುತ್ತಿವೆ. ಈ ನಡುವೆಯೂ ಇಲ್ಲಿನ ಸ್ತ್ರೀ ಶಕ್ತಿ ಸ್ವಸಹಾಯ ಸಂಘವು ಮುಖಗವಸು ತಯಾರಿಸಿ ಉತ್ತಮ ಆದಾಯ ಗಳಿಸುತ್ತಿವೆ.

ತಾಲ್ಲೂಕಿನ 6 ಸ್ತ್ರೀ ಶಕ್ತಿ ಸ್ವಸಹಾಯ ಸಂಘದ 30 ಸದಸ್ಯರ ತಂಡ ಸಂಜೀವಿನಿ ಸಮುದಾಯ ಬಂಡವಾಳ ನಿಧಿಯಿಂದ ಸಾಲ ಪಡೆದು, ಪ್ರಸ್ತುತ ದಿನದಲ್ಲಿ ಭಾರಿ ಬೇಡಿಕೆ ಇರುವ ಮುಖಗವುಸು, ಪಿನಾಯಿಲ್ ಹಾಗೂ ಬ್ಲೀಚಿಂಗ್ ಪೌಡರ್ ಸಿದ್ಧಪಡಿಸಿ ಗ್ರಾಮ ಪಂಚಾಯಿತಿಗಳಿಗೆ ಮಾರಾಟ ಮಾಡಿ ಆದಾಯಗಳಿಸಿ ಮಾದರಿಯಾಗಿದ್ದಾರೆ.

ತಾಲ್ಲೂಕಿನ ಕಟ್ಟೆಮಳಲವಾಡಿ, ಬಿಳಿಕೆರೆ, ಮೂಕನಹಳ್ಳಿ ಮತ್ತು ಬಿಳಿಗೆರೆ, ಕಲ್ಲಹಳ್ಳಿ ವ್ಯಾಪ್ತಿಯ ಶ್ರೀಗಂಗೆ ಸ್ತ್ರೀ ಶಕ್ತಿ, ಜ್ಯೋತಿ ಮಹಿಳಾ ಸಂಘ, ಮೂಕನಹಳ್ಳಿಯಮ್ಮ ಮಹಿಳಾ ಸಂಘ, ಸ್ತ್ರೀ ದುರ್ಗ, ಸ್ತ್ರೀ ಸಾಯಿಬಾಬ, ಕನ್ನಂಬಾಡಮ್ಮ, ಮಹದೇಶ್ವರ ಸ್ತ್ರೀ ಸ್ವಸಹಾಯಗಳ ಒಟ್ಟು 30 ಸದಸ್ಯರು ಒಗ್ಗೂಡಿ ₹ 2 ಲಕ್ಷ ಬಂಡವಾಳದಲ್ಲಿ ಗುಡಿಕೈಗಾರಿಕೆ ನಡೆಸುವ ಮೂಲಕ ಯಶಸ್ಸಿನ ಹೆಜ್ಜೆ ಹಾಕಿದ್ದಾರೆ. ಅಲ್ಲದೇ, 30 ಸದಸ್ಯರು ತಲಾ ₹ 23 ರಿಂದ 25 ಸಾವಿರ ಲಾಭ ಪಡೆದಿದ್ದಾರೆ.

ತಾಲ್ಲೂಕು ಆಡಳಿತದಿಂದ 7500 ಮಾಸ್ಕ್‌ಗೆ ಪೂರೈಸುವಂತೆ ಕೋರಿದ್ದರೆ, ಸ್ಥಳೀಯ ರಾಜಕೀಯ ಮುಖಂಡರೂ ಬೇಡಿಕೆ ಇಟ್ಟಿದ್ದಾರೆ. ಈ ನಿಟ್ಟಿನಲ್ಲಿ ಸಂಜೀವಿನಿ ಸಮುದಾಯ ಬಂಡವಾಳ ನಿಧಿಯಿಂದ ₹ 2 ಲಕ್ಷ ಸಾಲ ಪಡೆದು ಮುಖಗವಸು, ಪಿನಾಯಿಲ್, ಬ್ಲೀಚಿಂಗ್ ಪೌಡರ್ ಸಿದ್ಧಪಡಿಸುತ್ತಿದ್ದೇವೆ. 1500 ಲೀಟರ್ ಫಿನೈಲ್ ಸಿದ್ದಪಡಿಸಿದ್ದು, ಪಂಚಾಯಿತಿಗಳಿಗೆ ಲೀಟರ್ ಗೆ ₹ 60 ರಂತೆ, ಪ್ರತಿ ಮಾಸ್ಕ್ ಗೆ ₹ 25 ರಂತೆ ಮಾರಾಟ ಮಾಡುತ್ತಿದ್ದೇವೆ ಎಂದು ಸಂಜೀವಿನಿ ಮಹಿಳಾ ಸ್ವಸಹಾಯ ಸಂಘಗಳ ಸಂಘಟನಾಧಿಕಾರಿ ಮಂಜುಳಾ ತಿಳಿಸಿದ್ದಾರೆ.

ಸಂಜೀವಿನಿ ಸ್ವಸಹಾಯ ಸಂಘ ಸಿದ್ಧಪಡಿಸಿರುವ ಮಾಸ್ಕ್ ಉತ್ತಮ ಗುಣಮಟ್ಟದಿಂದ ಕೂಡಿದೆ. ಅಲ್ಲದೇ, ಆರ್ಥಿಕ ಸಂಕಷ್ಟದಲ್ಲೂ ಮಹಿಳೆಯರಿಗೆ ಉದ್ಯೋಗ ಮತ್ತು ಆರ್ಥಿಕ ಚಟುವಟಿಕೆ ನೀಡಿದಂತಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಇ.ಒ. ಗಿರೀಶ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.