ವಿಜಯಪುರ: ಬೆಂಗಳೂರು–ಪುಣಿ–ಮುಂಬೈ ರೈಲ್ವೆ ಕಾರಿಡಾರ್ ಘೋಷಣೆ ಮಾಡದೇ ಕರ್ನಾಟಕ ಮತ್ತು ಮಹಾರಾಷ್ಟ್ರಕ್ಕೆ ಅನ್ಯಾಯ ಮಾಡಲಾಗಿದೆ. ಪೂರಕ ಬಜೆಟ್ನಲ್ಲಾದರೂ ಈ ಕಾರಿಡಾರ್ ಘೋಷಣೆ ಮಾಡಬೇಕು. ಇಲ್ಲವಾದರೆ ಜನಜಾಗೃತಿ ಆಂದೋಲನ ಮಾಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು–ಹೈದರಾಬಾದ್, ಬೆಂಗಳೂರು–ಚೆನ್ನೈ ಹೈಸ್ಪೀಡ್ ರೈಲು ಸ್ವಾಗತಾರ್ಹವಾದರೂ, ಕರ್ನಾಟಕದೊಳಗೆ 100 ಕಿ.ಮೀ. ಕೂಡ ಓಡದ ಮಾರ್ಗಗಳಿಂದ ರಾಜ್ಯಕ್ಕೆ ಏನು ಲಾಭ? ಬದಲಿಗೆ ಬೆಂಗಳೂರು-ಪುಣೆ–ಮುಂಬೈ ಹೈಸ್ಪೀಡ್ ರೈಲು ಕಾರಿಡಾರ್ ಅಗತ್ಯವಾಗಿತ್ತು. ಇದಕ್ಕಾಗಿ ಕರ್ನಾಟಕ-ಮಹಾರಾಷ್ಟ್ರ ಸಂಸದರು ಪಕ್ಷಾತೀತವಾಗಿ ಧ್ವನಿ ಎತ್ತಬೇಕು ಎಂದು ಒತ್ತಾಯಿಸಿದರು.

ಮುಂಬೈ–ಬೆಂಗಳೂರು ಹೈಸ್ಪೀಡ್ ರೈಲ್ವೆ ಕಾರಿಡಾರ್ ಆಗಿದ್ದರೇ ‘ಐಟಿ ನಗರ’ ಬೆಂಗಳೂರು ಮತ್ತು ‘ವಾಣಿಜ್ಯ ನಗರಿ’ ನಡುವೆ ಸಂಪರ್ಕ ಸಾಧ್ಯವಾಗುತ್ತಿತ್ತು. ಇದರಿಂದ ಮಧ್ಯ ಕರ್ನಾಟಕ, ಉತ್ತರ ಕರ್ನಾಟಕ ಹಾಗೂ ದಕ್ಷಿಣ ಮಹಾರಾಷ್ಟ್ರಕ್ಕೂ ಹೆಚ್ಚು ಅನುಕೂಲವಾಗುತ್ತಿತ್ತು ಎಂದು ಹೇಳಿದರು.

ಕೇಂದ್ರದ ಪ್ರಭಾವಿ ಸಚಿವ ಎಂದು ಬಿಂಬಿಸಿಕೊಂಡಿರುವ ಪ್ರಹ್ಲಾದ ಜೋಶಿ, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರ ವೈಫಲ್ಯ ಎದ್ದು ಕಾಣುತ್ತಿದೆ. ರಾಜ್ಯದ ಬಿಜೆಪಿ ಸಂಸದರಿಂದ ಕರ್ನಾಟಕಕ್ಕೆ ದೊಡ್ಡ ಅನ್ಯಾಯವಾಗಿದೆ. ವಿಜಯಪುರ ಜಿಲ್ಲೆಯ ಸಂಸದರು ಆಟಕ್ಕೂ ಇಲ್ಲ, ಲೆಕ್ಕಕ್ಕೂ ಇಲ್ಲ ಎಂಬಂತಾಗಿದ್ದಾರೆ. ಉತ್ತರ ಕರ್ನಾಟಕ ಭಾಗದ ಸಂಸದರಾದ ಬಸವರಾಜ ಬೊಮ್ಮಾಯಿ, ಜಗದೀಶ ಶೆಟ್ಟರ್ ಸೇರಿದಂತೆ ರಾಜ್ಯದ ಯಾವೊಬ್ಬರ ಸಂಸದರೂ ಈ ಬಗ್ಗೆ ರೈಲ್ವೆ ಸಚಿವರನ್ನು, ಪ್ರಧಾನಿ ಮೋದಿ ಅವರ ಮೇಲೆ ಒತ್ತಡ ಹೇರುವಲ್ಲಿ ವಿಫಲವಾಗಿದ್ದಾರೆ ಎಂದು ಆರೋಪಿಸಿದರು.

ರಾಜ್ಯಕ್ಕೆ ನಿರಾಶೆ

ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿದ್ದ ₹5,600 ಕೋಟಿ ಇನ್ನೂ ಬಿಡುಗಡೆಯಾಲ್ಲ, ಕೃಷ್ಣಾ ಮೇಲ್ದಂಡೆ ರಾಷ್ಟ್ರೀಯ ಯೋಜನೆ ಘೋಷಣೆ ಇಲ್ಲ, ರೈತರಿಗಾಗಿ ಒಂದೇ ಒಂದು ಪರಿಣಾಮಕಾರಿ ಯೋಜನೆಯೂ ಇಲ್ಲ ಎಂದು ದೂರಿದರು.

ಕರ್ನಾಟಕದ ಅಭಿವೃದ್ಧಿ ಮಾದರಿಗಳನ್ನೇ ನಕಲು ಮಾಡಿ-ವಿಶ್ವವಿದ್ಯಾಲಯ ಟೌನ್ಶಿಪ್, ಮೆಡಿಕಲ್ ಟೂರಿಸಂ ಹಬ್, ಬಯೋಫಾರ್ಮಾ ಹಬ್ ಘೋಷಣೆ ಮಾಡಲಾಗಿದೆ. ಇವೆಲ್ಲವೂ ರಾಜ್ಯದ ಕ್ವಿನ್ಸಿಟಿ ಪರಿಕಲ್ಪನೆಯಾಗಿವೆ ಎಂದರು.

ಅತೀ ಹೆಚ್ಚು ತೆರಿಗೆ ಕೊಟ್ಟು ದೇಶವನ್ನು ನಡಿಸುತ್ತಿರುವ ರಾಜ್ಯಕ್ಕೆ ನ್ಯಾಯಸಮ್ಮತ ಹಂಚಿಕೆ ಇಲ್ಲ, ಅಗತ್ಯ ಯೋಜನೆಗಳಿಗೆ ಅನುದಾನ ಇಲ್ಲ. ಇದು ಕೇವಲ ಬಜೆಟ್ ವೈಫಲ್ಯವಲ್ಲ, ಒಕ್ಕೂಟ ವ್ಯವಸ್ಥೆಯ ಆತ್ಮಕ್ಕೇ ಹೊಡೆತ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.