ಬೆಂಗಳೂರು: ‘ಜಾಗತಿಕ ಅಭಿವೃದ್ದಿಯನ್ನು ಮುನ್ನಡೆಸುವ ಪ್ರಮುಖ ಒಕ್ಕೂಟವಾಗಿರುವ ‘ಬ್ರಿಕ್ಸ್’ ರಾಷ್ಟ್ರಗಳು ಕ್ವಾಂಟಮ್ ತಂತ್ರಜ್ಞಾನದ ಅಭಿವೃದ್ದಿಗೆ ಪರಸ್ಪರ ಸಹಕಾರಕ್ಕೆ ಮುಂದಾಗಬೇಕು’ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಹೇಳಿದರು.

ತಮ್ಮನ್ನು ಭೇಟಿಯಾದ ಬ್ರೆಜಿಲ್ನ ಸಾರ್ವಜನಿಕ ಸೇವೆಗಳ ನಿರ್ವಹಣೆ ಮತ್ತು ನಾವೀನ್ಯತಾ ಸಚಿವೆ ಎಸ್ತರ್ ಡ್ವೆಕ್ ನೇತೃತ್ವದ ನಿಯೋಗದ ಜೊತೆ ಅವರು ಮಂಗಳವಾರ ಸಭೆ ನಡೆಸಿದರು.

‘ಆಸಿಯಾನ್ನಂತಹ ಇತರ ಅಂತರರಾಷ್ಟ್ರೀಯ ಒಕ್ಕೂಟಗಳು ಈಗಾಗಲೇ ಕ್ವಾಂಟಮ್ ಶೃಂಗಸಭೆಗಳನ್ನು ಆಯೋಜಿಸುತ್ತಿವೆ. ಬ್ರಿಕ್ಸ್ ಸದಸ್ಯರಾಗಿ ನಾವು ಕೃಷಿ, ಔಷಧ ಸಂಶೋಧನೆ, ಜಲಸಂಪನ್ಮೂಲ ನಿರ್ವಹಣೆ, ಹವಾಮಾನ ಮುನ್ಸೂಚನೆ ಮತ್ತು ಪ್ರವಾಹ ನಿರ್ವಹಣೆಯನ್ನು ಸುಧಾರಿಸಲು ಕ್ವಾಂಟಮ್ ತಂತ್ರಜ್ಞಾನವನ್ನು ಬಳಸುವ ನಿಟ್ಟಿನಲ್ಲಿ ಒಟ್ಟಾಗಿ ಕೆಲಸ ಮಾಡಬೇಕು’ ಎಂದು ಸಚಿವರು ತಿಳಿಸಿದರು.

‘ಕ್ವಾಂಟಮ್ ಇನ್ನೋವೇಶನ್ ಫಂಡ್’ ಘೋಷಣೆ ಮತ್ತು ‘ಕ್ವಾಂಟಮ್ ಸಿಟಿ’ ಅಭಿವೃದ್ಧಿಯೊಂದಿಗೆ ಕರ್ನಾಟಕವು ದೇಶಕ್ಕೇ ಮಾದರಿಯಾಗಿದೆ. 2035ರ ವೇಳೆಗೆ 20 ಬಿಲಿಯನ್ ಯುಎಸ್ ಡಾಲರ್ ಮೌಲ್ಯದ ಕ್ವಾಂಟಮ್ ಆರ್ಥಿಕತೆಯನ್ನು ಸೃಷ್ಟಿಸುವುದು ಮತ್ತು ಎರಡು ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವುದು ನಮ್ಮ ಗುರಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.