ಬೆಂಗಳೂರು: ವಿಧಾನ ಪರಿಷತ್ ಸದಸ್ಯರಾಗಿ ಬಿಜೆಪಿ ಅಭ್ಯರ್ಥಿ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ 113 ಮತಗಳನ್ನು ಪಡೆದು ಸೋಮವಾರ ಆಯ್ಕೆಯಾದರು. ವಿಧಾನಸಭೆಯಿಂದ ಪರಿಷತ್ನ ಒಂದು ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. ಸವದಿಅಧಿಕಾರ ಅವಧಿ 2022 ಜೂನ್ 14ರ ವರೆಗೆ ಇರುತ್ತದೆ.
ಒಟ್ಟು 120 ಶಾಸಕರು ತಮ್ಮ ಹಕ್ಕು ಚಲಾಯಿಸಿದ್ದು, ಅದರಲ್ಲಿ 7 ಮತಗಳು ಅಸಿಂಧುಗೊಂಡಿದ್ದವು. ಕಾಂಗ್ರೆಸ್, ಜೆಡಿಎಸ್ ಶಾಸಕರು ಮತದಾನದಿಂದ ದೂರ ಉಳಿದರು. ವರಿಷ್ಠರ ಸೂಚನೆ ಧಿಕ್ಕರಿಸಿ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡಮತ ಚಲಾಯಿಸಿದರು.
ಬಿಜೆಪಿಯಲ್ಲಿ 117 ಶಾಸಕರು ಇದ್ದು, ಅನಾರೋಗ್ಯದಿಂದಾಗಿ ಎಸ್.ಎ.ರಾಮದಾಸ್ ಬಂದಿರಲಿಲ್ಲ.