ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಬರ ಪರಿಹಾರ ಬಿಡುಗಡೆಯಲ್ಲೂ ಕೇಂದ್ರ ಸರ್ಕಾರ ಇಂತಹ ಧೋರಣೆ ಅನುಸರಿಸಿತ್ತು. ಕಾಲಕಾಲಕ್ಕೆ ಅಧಿಕಾರಿಗಳು ಮಾಡಿದ್ದ ಮನವಿ, ನಷ್ಟದ ದಾಖಲೆಗಳನ್ನು ಕೋರ್ಟ್‌ಗೆ ಸಲ್ಲಿಸಲಾಗಿತ್ತು. ನಂತರ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿತು. ಮಸೂದೆಗಳ ಕುರಿತು ಸರ್ಕಾರ ಸ್ಪಷ್ಟೀಕರಣ ನೀಡಿದ ನಂತರವೂ ರಾಜ್ಯಪಾಲರು ವಾಪಸ್ ಕಳುಹಿಸಿದ್ದಾರೆ. ಇದರ ಹಿಂದೆ ಯಾರಿದ್ದಾರೆ ಎನ್ನುವ ಕುರಿತು ಹೇಳುವ ಅಗತ್ಯವಿಲ್ಲ’ ಎಂದು ಹೇಳಿದರು.