ಬೆಂಗಳೂರು: ‘ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ (ಎಂಎಸ್ಐಎಲ್) ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿರುವ ಕಾರಣ, ಇದರ ಚಿಟ್ ಫಂಡ್ನಲ್ಲಿ ಜನರು ಹೂಡಿಕೆ ಮಾಡುವ ಹಣ ಸುಭದ್ರವಾಗಿರುತ್ತದೆ ಎಂಬ ಗ್ಯಾರಂಟಿ ಇದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಎಂಎಸ್ಐಎಲ್ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಎಂಎಸ್ಐಎಲ್ ಚಿಟ್ಸ್’ ಹೊಸ ತಂತ್ರಾಂಶ ಹಾಗೂ ಮೊಬೈಲ್ ಆ್ಯಪ್ ಅನ್ನು ಅವರು ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿದ ಅವರು, ‘ಹೂಡಿಕೆ ಹಣ ಸುರಕ್ಷಿತವಾಗಿರುವುದು ಅತ್ಯಂತ ಅಗತ್ಯವಾಗಿದ್ದು, ಎಂಎಸ್ಐಎಲ್ ಈ ಭರವಸೆ ನೀಡುತ್ತದೆ. ತಮ್ಮ ಹೂಡಿಕೆಯ ಕೇವಲ ಶೇ 5ರಷ್ಟು ಲಾಭ ಪಡೆಯುವ ಸಂಸ್ಥೆಯು ಜನರ ಆರ್ಥಿಕ ಭದ್ರತೆಗೆ ನೆರವಾಗಿದೆ’ ಎಂದರು.

‘ಎಂಎಸ್ಐಎಲ್ ಹಲವು ದಶಕಗಳಿಂದ ಜನರ ವಿಶ್ವಾಸಕ್ಕೆ ಪಾತ್ರವಾಗಿದೆ. 2005ರಲ್ಲಿ ಚಿಟ್ ಫಂಡ್ ಆರಂಭವಾಗಿದೆ. ಉಳಿತಾಯದ ಸಂಸ್ಕೃತಿ ಅತ್ಯವಶ್ಯವಾಗಿದ್ದು, ಅಗತ್ಯ ಸಂದರ್ಭದಲ್ಲಿ ಉಳಿತಾಯದ ಹಣ ನೆರವಿಗೆ ಬರುತ್ತದೆ. ಸರ್ಕಾರದ ಗ್ಯಾರಂಟಿ ಯೋಜನೆಗಳಾದ ಶಕ್ತಿ, ಗೃಹಲಕ್ಷ್ಮಿ, ಗೃಹಲಕ್ಷ್ಮಿ, ಯುವನಿಧಿ, ಅನ್ನಭಾಗ್ಯದಿಂದ ಉಳಿತಾಯವಾಗುವ ಹಣವನ್ನು ಜನರು, ವಿಶೇಷವಾಗಿ ಮಹಿಳೆಯರು ಈ ಚಿಟ್ ಫಂಡ್ನಲ್ಲಿ ಹೂಡಿಕೆ ಮಾಡಬೇಕು’ ಎಂದು ಸಲಹೆ ನೀಡಿದರು.

₹ 10 ಸಾವಿರ ಕೋಟಿಗೆ ಏರಿಸುವ ಗುರಿ: ‘ಕೇರಳ ರಾಜ್ಯದಲ್ಲಿ ಚಿಟ್ ಫಂಡ್ ಕ್ಷೇತ್ರದಲ್ಲಿ ₹ 47 ಸಾವಿರ ಕೋಟಿ ವಹಿವಾಟು ನಡೆಯುತ್ತದೆ. ಕರ್ನಾಟಕದಲ್ಲಿ ಕೇವಲ ₹ 500 ಕೋಟಿ ವ್ಯವಹಾರ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಈ ಮೊತ್ತವನ್ನು ₹ 10 ಸಾವಿರ ಕೋಟಿಗೆ ಹೆಚ್ಚಿಸುವ ಗುರಿಯನ್ನು ಎಂಎಸ್ಐಎಲ್ ಹೊಂದಿದೆ. ಶಿಕ್ಷಣ, ಆರೋಗ್ಯ, ಮದುವೆ, ಮನೆ ಹೀಗೆ ಜನರು ತಮ್ಮ ಅಗತ್ಯಗಳಿಗಾಗಿ ಹೂಡಿಕೆ ಮಾಡುವ ಉಳಿತಾಯದ ಮೊತ್ತ ಸುರಕ್ಷಿತವಾಗಿರುವ ವಿಶ್ವಾಸವಿದೆ’ ಎಂದರು.

‘ವಿಷನ್-2030’ ನೀಲನಕ್ಷೆ ಸಿದ್ಧ

‘ಎಂಎಸ್ಐಎಲ್ 2024-25ರಲ್ಲಿ ₹ 3,882 ಕೋಟಿ ವಹಿವಾಟು ನಡೆಸಿ, ₹ 122 ಕೋಟಿಗಿಂತಲೂ ಹೆಚ್ಚು ಲಾಭ ದಾಖಲಿಸಿದೆ. ಸಂಸ್ಥೆಯ ಬಲವರ್ಧನೆಗೆ ‘ವಿಷನ್-2030’ ಎನ್ನುವ ನೀಲನಕ್ಷೆ ಸಿದ್ಧಪಡಿಸಲಾಗಿದೆ’ ಎಂದು ಸಂಸ್ಥೆಯ ಅಧ್ಯಕ್ಷ ಪುಟ್ಟರಂಗ ಶೆಟ್ಟಿ ತಿಳಿಸಿದರು.

ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್. ಸೆಲ್ವಕುಮಾರ್, ಎಂಎಸ್ಐಎಲ್ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಇದ್ದರು.

‘ಎಂಎಸ್ಐಎಲ್ ಚಿಟ್ಸ್’ನ ವಿಶೇಷಗಳು

* ಸುಗಮ, ಪಾರದರ್ಶಕ ವ್ಯವಹಾರಕ್ಕೆ ತಂತ್ರಾಂಶ, ಮೊಬೈಲ್ ಆ್ಯಪ್ ಅಭಿವೃದ್ಧಿ

* ಕಂತನ್ನು ಯುಪಿಐ, ವೆಬ್ಸೈಟ್ ಅಥವಾ ಆನ್ಲೈನ್ ಪಾವತಿಗೆ ಅವಕಾಶ

* ಆನ್ಲೈನ್ ಮೂಲಕ ಬಿಡ್ನಲ್ಲಿ ಭಾಗವಹಿಸಬಹುದು

* ಸರ್ಕಾರಿ ನೌಕರರ ಹೂಡಿಕೆಗೆ ಆದ್ಯತೆ

* ಸ್ವಸಹಾಯ ಸಂಘಗಳ ಮಹಿಳೆಯರಿಗೆ ವಿಶೇಷ ಉಳಿತಾಯ ಸ್ಕೀಮ್

* ಸ್ವಸಹಾಯ ಸಂಘಗಳ ಸಖಿಯರು ಏಜೆಂಟರಾಗಿ ನೇಮಕ

* ಹೋಟೆಲ್, ಕಿರಾಣಿ ಅಂಗಡಿಗಳೂ ಏಜೆಂಟ್ ರೀತಿ ಕಾರ್ಯನಿರ್ವಹಿಸಲು ವ್ಯವಸ್ಥೆ

‘ಎಂಎಸ್ಐಎಲ್ ಸ್ಟೋರ್’ ತೆರೆಯುವ ಚಿಂತನೆ: ಎಂ.ಬಿ. ಪಾಟೀಲ

‘ಸರ್ಕಾರಿ ನೌಕರರಿಗೆ ಎಲ್ಲ ವಸ್ತುಗಳು ಸಬ್ಸಿಡಿ ದರದಲ್ಲಿ ಸಿಗುವಂತೆ ಮಾಡಲು ಮಿಲಿಟರಿ ಕ್ಯಾಂಟೀನ್ ಮಾದರಿಯಲ್ಲಿ ಎಂಎಸ್ಐಎಲ್ ಸ್ಟೋರ್ ತೆರೆಯುವ ಚಿಂತನೆ ಇದೆ’ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದರು.

‘ಎಂಎಸ್ಐಎಲ್ ಸ್ಟೋರ್ ತೆರೆಯುವ ಕುರಿತಂತೆ ಸಾಧಕಬಾಧಕಗಳನ್ನು ಅಧ್ಯಯನ ಮಾಡಲಾಗುತ್ತಿದೆ. ಇದರಿಂದ 20 ಲಕ್ಷ ಕುಟುಂಬಗಳಿಗೆ ಅನುಕೂಲ ಆಗಲಿದೆ’ ಎಂದರು.

‘ಎಂಎಸ್ಐಎಲ್ ಈಗ 27 ಶಾಖೆಗಳನ್ನು ಹೊಂದಿದ್ದು ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳಿಗೂ ವಿಸ್ತರಿಸಲಾಗುವುದು. ಚಿಟ್ ಫಂಡ್ ಕೆಲಸಗಳಿಗೆ ಸಂಸ್ಥೆಯು ಏಜೆಂಟರನ್ನು ನೇಮಿಸಲಿದ್ದು ಇದರಿಂದ 10 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ಸಿಗಲಿದೆ. ಮನೆ ಮನೆಗೂ ಎಂಎಸ್ಐಎಲ್ ಚಿಟ್ ತಲುಪಿಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.