ಮೈಸೂರು: ಮುಡಾದಲ್ಲಿ ನಿಯಮ ಉಲ್ಲಂಘನೆಯ ಪ್ರಕರಣಗಳು ಮೊಗೆದಷ್ಟೂ ಹೊರಬರುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಕೆ.ಮರೀಗೌಡ ಮುಡಾ ಅಧ್ಯಕ್ಷರಾದ ನಂತರ, ನಾಲ್ಕು ತಿಂಗಳಲ್ಲೇ 79 ಎಕರೆಯಷ್ಟು ಜಮೀನಿಗೆ 50:50 ಅನುಪಾತದಡಿ ಬದಲಿ ನಿವೇಶನ ಗಳನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ.
‘ಈ ಅನುಪಾತದಡಿ ಒಂದು ಬದಲಿ ನಿವೇಶನ ಹಂಚಿಕೆ ಮಾಡಬಾರದು’ ಎಂದು ರಾಜ್ಯ ಸರ್ಕಾರ 2023ರ ಅಕ್ಟೋಬರ್‌ನಲ್ಲೇ ಆದೇಶಿಸಿತ್ತು.
2024ರ ಮಾರ್ಚ್‌ನಿಂದ ಜೂನ್ ಅಂತ್ಯದವರೆಗೆ 8.87 ಲಕ್ಷ ಚದರ ಅಡಿ ವಿಸ್ತೀರ್ಣದ ಬದಲಿ ನಿವೇಶನಗಳನ್ನು ಪ್ರತಿಷ್ಠಿತ ಬಡಾವಣೆಗಳಲ್ಲಿ ಹಂಚಲಾಗಿದೆ. ಅದರ ದಾಖಲೆಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ.