ಮುಧೋಳ: ‘ಉಪಚುನಾವಣೆಯಲ್ಲಿ ಕಡಿಮೆ ಸ್ಥಾನ ಗೆದ್ದರೆ ಬಿಜೆಪಿ ಮತ್ತೆ ಆಪರೇಷನ್ ಕಮಲಕ್ಕೆ ಕೈಹಾಕಲಿದೆ ಎಂಬ ಭಯ ಜೆಡಿಎಸ್ ಹಾಗೂ ಕಾಂಗ್ರೆಸ್ಗೆ ಇದೆ’ ಎಂದು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

ತಾಲ್ಲೂಕಿನಯಡಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನಿಷ್ಠ ಏಳರಿಂದ ಎಂಟುಸೀಟು ಗೆದ್ದರೆ ಆಪರೇಷನ್ ಗೆ ಹೋಗಲಿಕ್ಕಿಲ್ಲ.ಜನ ಬೈಯಲಿದ್ದಾರೆ ಎಂದರು.

ಆಪರೇಷನ್ ಕಮಲ ಆಗ್ದಿದ್ರೆ ಜೆಡಿಎಸ್ ಬೆಂಬಲ ಕೇಳಲಿದ್ದಾರೆ. ಯಡಿಯೂರಪ್ಪ ಸರ್ಕಾರ ಬೀಳೊಲ್ಲ ಎಂದು ಈಗಾಗಲೇ ಎಚ್.ಡಿ.ದೇವೇಗೌಡ, ಕುಮಾರಸ್ವಾಮಿ ಹೇಳಿದ್ದಾರೆ. ಬೀಳೊಲ್ಲ ಎಂದರೆ ಜಾದೂ ಮಾಡೋಕೆ ಆಗೊಲ್ಲ. ಬದಲಿಗೆ ಬೆಂಬಲ ಕೊಡಬಹುದು ಎಂದು ಮಾರ್ಮಿಕವಾಗಿ ಹೇಳಿದರು.

‘ಸದ್ಯದ ಪರಿಸ್ಥಿತಿಯಲ್ಲಿ ಮೂರು ಪಕ್ಷಗಳ ಶಾಸಕರಿಗೂ ಚುನಾವಣೆಗೆ ಹೋಗುವ ಮನಸ್ಸು ಇಲ್ಲ. ಅಂತಹ ಪರಿಸ್ಥಿತಿ ಬಂದರೆ ಯಾರ್ಯಾರು ಎಲ್ಲಿಗೆ ಹೋಗ್ತಾರೊ ಗೊತ್ತಿಲ್ಲ. ಸುಪ್ರೀಂಕೋರ್ಟ್ ಅನರ್ಹರಿಗೂ ಸ್ಪರ್ಧೆಗೆ ಅವಕಾಶ ನೀಡಿದೆ. ಹೀಗಾಗಿ ಪಕ್ಷಾಂತರಕ್ಕೆ ಏನು ಅಭ್ಯಂತರವಿಲ್ಲ ಅನ್ನೋ ಪರಿಸ್ಥಿತಿ ಇದೆ. ನನ್ನ ಪ್ರಕಾರ ಬಿಜೆಪಿ ಸರ್ಕಾರ ಹೋಗಲ್ಲ’ಎಂದು ಭವಿಷ್ಯ ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.