ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಗ್ರ ದೂರದೃಷ್ಠಿಯ ಅಭಿವೃದ್ಧಿಯ ಕನಸು ನನ್ನದು: ಮನ್ಸೂರ್‌ ಅಲಿ ಖಾನ್‌

Published 15 ಏಪ್ರಿಲ್ 2024, 15:25 IST
Last Updated 15 ಏಪ್ರಿಲ್ 2024, 15:25 IST
ಅಕ್ಷರ ಗಾತ್ರ

ಬೆಂಗಳೂರು: ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದ ಶಾಸಕರೂ ಆಗಿರುವ ಇಂಧನ ಸಚಿವ ಕೆ.ಜೆ. ಜಾರ್ಜ್‌ ಅವರ ಸಾರಥ್ಯದಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮನ್ಸೂರ್‌ ಅಲಿ ಖಾನ್‌ ಅವರು ಕ್ಷೇತ್ರ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಸೋಮವಾರ ಚುನಾವಣಾ ಪ್ರಚಾರ ರ್‍ಯಾಲಿ ನಡೆಸಿದರು.

ವೀರಣ್ಣಪಾಳ್ಯ, ನಾಗವಾರ ಮುಖ್ಯರಸ್ತೆ, ಎಚ್.ಬಿ.ಆರ್. ಲೇಔಟ್, ಕೆ.ಜಿ. ಹಳ್ಳಿ ಹಾಗೂ ಪಿಳ್ಳಣ್ಣ ಗಾರ್ಡನ್ ಸೇರಿದಂತೆ ವಿವಿಧೆಡೆ ಮನ್ಸೂರ್‌ ಅಲಿ ಖಾನ್‌ ಮತ ಯಾಚಿಸಿದರು. ‘ಯುವಶಕ್ತಿಗೆ ಉದ್ಯೋಗ, ಎಲ್ಲ ವರ್ಗದ ಜನರ ಪ್ರಗತಿ, ನಮ್ಮ ಬೆಂಗಳೂರು ಕೇಂದ್ರದ ಸಮಗ್ರ ದೂರದೃಷ್ಟಿಯ ಅಭಿವೃದ್ಧಿಯ ಕನಸು ನನ್ನದು. ನನಗೆ ಮತ ನೀಡಿ ಕ್ಷೇತ್ರದ ಅಭಿವೃದ್ಧಿಗೆ ಕೈ ಜೋಡಿಸಿ’ ಎಂದು ಅವರು ಮನವಿ ಮಾಡಿದರು.

ಕೆಪಿಸಿಸಿ ಉಪಾಧ್ಯಕ್ಷ ಉಬೇದುಲ್ಲ ಷರೀಫ್, ಕ್ಷೇತ್ರದ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಾಣಾ ಜಾರ್ಜ್‌, ಕಾಂಗ್ರೆಸ್ ಬ್ಲಾಕ್‌ ಅಧ್ಯಕ್ಷರು, ವಾರ್ಡ್‌ ಅಧ್ಯಕ್ಷರು, ಬಿಬಿಎಂಪಿ ಮಾಜಿ ಕಾಂಗ್ರೆಸ್‌ ಸದಸ್ಯರು, ನಾಯಕಿಯರು ಹಾಗೂ ಯುವ ಕಾಂಗ್ರೆಸ್‌ ಕಾರ್ಯಕರ್ತರು ರ‍್ಯಾಲಿಯಲ್ಲಿ ಭಾಗವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT