ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಮಾವುತನ ಕಪಾಳಕ್ಕೆ ಹೊಡೆದ ಪ್ರವಾಸಿಗ – ಮಾತಿನ ಚಕಮಕಿ

Last Updated 20 ಅಕ್ಟೋಬರ್ 2018, 11:35 IST
ಅಕ್ಷರ ಗಾತ್ರ

ಮೈಸೂರು: ಅರಮನೆ ಆವರಣದಲ್ಲಿ ದಸರಾ ಆನೆ‌ ನೋಡಲು ಬಂದಿದ್ದ ಪ್ರವಾಸಿಗನೊಬ್ಬ ಮಾವುತನಿಗೆ ಕಪಾಳಕ್ಕೆ ಹೊಡೆದಿದ್ದಾನೆ.

ಆನೆಗಳನ್ನು ತೀರಾ ಹತ್ತಿರದಿಂದ ನೋಡುತ್ತಿದ್ದ ಪ್ರವಾಸಿಗನಿಗೆ ದೂರ ಸರಿಯುವಂತೆ ಮಾವುತರ ಗುಂಪು ಎಚ್ಚರಿಕೆ ನೀಡಿದೆ. ಇದರಿಂದ‌ ಕುಪಿತಗೊಂಡ ವ್ಯಕ್ತಿಯೊಬ್ಬ ಬಲರಾಮ ಆನೆಯ ಮಾವುತ ತಿಮ್ಮ ಅವರಿಗೆ ಕಪಾಳಕ್ಕೆ ಬಾರಿಸಿದ್ದಾನೆ.

ಅಂಬಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಆನೆಗಳನ್ನು ಸಾಲಿನಲ್ಲಿ ಶೆಡ್‌ನಲ್ಲಿ ನಿಲ್ಲಿಸಿ, ಯಾರೂ ಹತ್ತಿರ ಬಾರದಂತೆ ಹಗ್ಗದಿಂದ ತಡೆಯಲಾಗಿರುತ್ತದೆ. ಈ ಹಗ್ಗವನ್ನು ದಾಟಿ ಒಳ ಪ್ರವೇಶಿಸಿದ ಪ್ರವಾಸಿಗ ಬಲರಾಮ ಆನೆಗೆ ತಿನ್ನಲು ಕಬ್ಬು ಕೊಡಲು ಮುಂದಾಗಿದ್ದಾನೆ. ಆನೆಗಳ ಹತ್ತಿರ ಹೋಗಕೂಡದು ಎಂದು ಮಾವುತ ತಿಮ್ಮ ತಿಳಿ ಹೇಳಿದ್ದು, ಕಬ್ಬನ್ನು ಕಿತ್ತುಕೊಂಡಿದ್ದಾದೆ. ಇದರಿಂದ ಕೋಪಗೊಂಡ ಪ್ರವಾಸಿಗ ಮಾವುತರಿಗೆ ಕಪಾಳಕ್ಕೆ ಹೊಡೆದಿದ್ದಾನೆ.

ಇದರಿಂದ ಮಾವುತರು ಹಾಗೂ ಕಾವಾಡಿಗಳು ಮತ್ತು ಪ್ರವಾಸಿಗರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿದರು. ಆದರೆ, ಕಪಾಳಕ್ಕೆ ಹೊಡೆದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಳ್ಳದೇ ಬಿಟ್ಟು ಕಳುಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT